ಬೆಂಗಳೂರು: ದೇಶಾದ್ಯಂತ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಏ.26ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಇಂದು (ಮೇ.7) ಎರಡನೇ ಹಂತದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಹಲವು ವಿಚಿತ್ರ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಗಿದೆ.
ಇಂದು (ಮೇ.7) ಎರಡನೇ ಹಂತದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಹಲವು ವಿಚಿತ್ರ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಗಿದೆ.
ಶಿಕಾರಿಪುರದ ಹಿತ್ತಲ ಗ್ರಾಮದಲ್ಲಿ ಮತಹಾಕಲು ಹೋಗುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಮಡಿದರೇ, ಚುರ್ಚಿಗುಂಡಿಯಿಂದ ಭದ್ರವಾತಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸವಾರ ಮಂಜುನಾಥ್ ರಸ್ತೆ ಅಪಘಾತದಲ್ಲಿ ಮಡಿದಿದ್ದಾರೆ.
ಇತ್ತ ಸೊರಬ ತಾಲೂಕಿನ ಕಿಂಸಿ ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ವೃದ್ಧೆ ಮಲ್ಲಮ್ಮ (96 ವರ್ಷ) ಮರಣ ಹೊಂದಿದ್ದಾರೆ.
ಪತಿ ಸಾವಿನಲ್ಲಿಯೂ ಮತದಾನ ಮಾಡಿದ ಪತ್ನಿ: ಮಂಗಳೂರು ಜಿಲ್ಲೆಯ ಹೊಸ ನಗರ ತಾಲೂಕಿನ ಆಡುಗೋಡಿಯ ವೆಂಕಟೇಶ್ ಅವರು ಅನಾರೋಗ್ಯದಿಂದ ಇಂದು ಮೃತರಾದರು. ಇತ್ತ ಪತಿಯ ಸಾವಿನ ನಡುವೆಯೂ ಪತ್ನಿ ಕಲಾವತಿ ಮತಗಟ್ಟೆಗೆ ಹೋಗಿ ಮತಹಾಕಿ, ಮತದಾನದ ಮಹತ್ವವನ್ನು ಸಾರಿದ್ದಾರೆ.
ಕುಡಿದು ರೋದನೆ ನೀಡಿದ ಮತದಾರ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಮತದಾನೊಬ್ಬ ಕುಡಿದು ಬಂದು ರೋದನೆ ನೀಡಿದ್ದಾರೆ. ಗ್ರಾಮದ 154ನೇ ಮತಗಟ್ಟೆಯ ಮತದಾರನೊಬ್ಬ ಮತ ಚಲಾಯಿಸಿದ್ದಾನೆ. ಮತ ಚಲಾಯಿಸುವಾಗಿ ಇವಿಎಂ ಸದ್ದು ಮಾಡುತ್ತಿಲ್ಲ ಎಂದು ರಗಳೆ ತೆಗೆದಿದ್ದಾನೆ. ಬಳಿಕ ಬಂದ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ದೂಡಿದ್ದಾರೆ. ಹೊರ ಬಿದ್ದ ಮತದಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಮತ್ತೊಂದು ವೀಡಿಯೋ ವೈರಲ್: ಹಾವೇರಿ ಲೋಕಸಭಾ ಕ್ಷೇತ್ರದ ಮತದಾನ ಮಾಡಿದ ಮತದಾರನೊಬ್ಬ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾನೆ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…