ಬೆಂಗಳೂರು : ಲೋಕಸಭಾ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗಳಿಗೆ ತೆರಳಿ ಮತ ಚಲಾವಣೆ ಮಾಡುತ್ತಿದ್ದಾರೆ.
ಮುಂಜಾನೆಗೆ ಹೋಲಿಸಿದರೆ ಮಧ್ಯಾಹ್ನ ೧ಗಂಟೆಯ ಬಳಿಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾವಣೆ ಮಾಡುತ್ತಿರುವುದು ಕಂಡು ಬಂದಿದೆ.
ಈ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ನಾಯಕರು ಸೇರಿದಂತೆ ಅನೇಕ ಗಣ್ಯರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾವಣೆ ಮಾಡಿದರು.
ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಇಂದು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಉಡುಗಿಯ ಸ್ವಗ್ರಾಮದಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ತಾತ (ಶತಾಯುಷಿ ಡಾ. ಭೀಮಣ್ಣ ಖಂಡ್ರೆ), ತಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಮೊಮ್ಮಗ (ಬೀದರ್ ಕಾಂಗ್ರೆಸ್ ಅಭ್ಯರ್ಥಿ) ಸಾಗರ್ ಖಂಡ್ರೆ ಮತ ಚಲಾಯಿಸಿದರು.
ಇನ್ನು, ಶಿವಮೊಗ್ಗ ನಗರದ ಬಸವನಗುಡಿಯ ಸತ್ಯ ಸಾಯಿ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಡಿ ಹೆಚ್ ಶಂಕರಮೂರ್ತಿ ಅವರು, ಪತ್ನಿ ಶ್ರೀಮತಿ ಸತ್ಯವತಿ ಅವರು ಮತ್ತು ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು, ಪತ್ನಿ ಶ್ರೀಮತಿ ಪ್ರತಿಭಾ ಅರುಣ್ ಅವರು, ಪುತ್ರಿ ಡಿ.ಎ. ಸುಪ್ರಿಯಾ ಮತದಾನ ಮಾಡಿದರು.
ಚಂದ್ರಶೇಖರ್ ಮೂರ್ತಿ ಕೆ.ಎಸ್. ಮೈಸೂರಿನಲ್ಲಿ ಅನೇಕ ಬ್ಯಾಂಕ್‌ಗಳಿವೆ. ಅವು ಹಣಕಾಸು ವ್ಯವಹಾರ ಮಾಡುವ ಬ್ಯಾಂಕ್. ಆದರೆ ಮೈಸೂರಿನ ಜೆ.ಪಿ.ನಗರದ ಅಕ್ಕಮಹಾದೇವಿ…
ಶ್ರೇಯಸ್ ದೇವನೂರು ಭಾರತದ ಅರಣ್ಯಗಳು ಕೇವಲ ಮರಗಳ ಗುಂಪಲ್ಲ; ಅವು ಜೀವವೈವಿಧ್ಯದ ಅದ್ಭುತ ಭಂಡಾರ. ಅಲ್ಲಿ ಪ್ರತಿಯೊಂದು ಕ್ಷಣವೂ ಅನಿರೀಕ್ಷಿತ,…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವಲಯದ ಕೆಲವೆಡೆ ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಗಾಯಗೊಂಡಿದ್ದರು.…
ರೈತರು, ಕಾಡುಪ್ರಾಣಿಗಳಿಗೆ ನೀರಿನ ತೊಂದರೆ ; ಶೀಘ್ರದಲ್ಲಿ ಹೂಳು ತೆಗೆಸಲು ಆಗ್ರಹ ಹನೂರು : ಉಡುತೊರೆ ಹಳ್ಳ ಜಲಾಶಯ ನಿರ್ಮಾಣವಾದ…
ಮೈಸೂರು : ನಗರದಲ್ಲಿ ಮಿನಿ ದಸರಾ ಎಂದೇ ಪ್ರಸಿದ್ಧಿ ಪಡೆದಿರುವ, ಸಾಂಸ್ಕೃತಿಕ ನಗರಿ ಮೈಸೂರಿನ ಮೆರುಗು ಹೆಚ್ಚಿಸಿರುವ ಆಚರಣೆಗಳಲ್ಲಿ ಮೈಸೂರು…