ರಾಜ್ಯ

ಲೋಕಸಭಾ ಚುನಾವಣೆ: ಮಂಡ್ಯದಿಂದಲೇ ಸಂಸದೆ ಸುಮಲತಾ ಸ್ಪರ್ಧೆ!

ಮಂಡ್ಯ: ೨೦೨೪ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಸಂಸದೆ ಸುಮಲತಾ ಅಂಬರೀಶ್‌ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಸುಮಲತಾ ಆಪ್ತ ಹನಕೆರೆ ಶಶಿಕುಮಾರ್‌ ಹೇಳಿದ್ದಾರೆ.

ಕೆಲವೇ ತಿಂಗಳು ಬಾಕಿಯಿರುವ ಲೋಕಸಭಾ ಚುನಾವಣೆಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳು ಸಜ್ಜಾಗುತ್ತಿದ್ದು, ಚುನಾವಣಾ ಕಣ ರಂಗೇರಿದೆ. ಇದರ ಬೆನ್ನಲ್ಲೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್‌, ಎನ್‌ಡಿಎ ಜೊತೆಗೆ ಮೈತ್ರಿಯಾಗಿದೆ. ಮೈತ್ರಿಯ ಬಳಿಕ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟುಕೊಟ್ಟು, ಸುಮಲತಾ ಅಂಬರೀಶ್‌ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ಅನುಮಾನ ಎಂದು ಹೇಳಲಾಗುತ್ತಿತ್ತು.

ಈ ಬಗ್ಗೆ ಸಂಸದೆ ಆಪ್ತ ಶಶಿಕುಮಾರ್‌ ಮಾತನಾಡಿದ್ದು, ಸುಮಲತಾ ಅಂಬರೀಶ್‌ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ. ಮುಂದಿನ ಚುನಾವಣೆಯಲ್ಲಯೂ ಸುಮಲತಾ ಮಂಡ್ಯ ಅಭ್ಯರ್ಥಿಯಾಗಿರುತ್ತಾರೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಂಸದರು ಮಾಡಿದ್ದಾರೆ. ಎಲ್ಲಾ ಹೋರಾಟಗಳಲ್ಲಿಯೂ ಮುಂದಿರುವ ಅವರು, ದಿಶಾ ಸಭೆಯನ್ನು ಹೆಚ್ಚು ಗಳಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಹಿಂದಿನ ಚುನಾವಣೆಯಲ್ಲಿ ಸುಮಲತಾ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟಿದ್ದರು ಎಂದರು.

ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಸದಸ್ಯತ್ವವನ್ನು ಸುಮಲತಾ ಅವರು ಇನ್ನು ಪಡೆದಿಲ್ಲ, ಅವರಿನ್ನು ಪಕ್ಷೇತರ ಸಂಸದೆಯಾಗಿದ್ದಾರೆ . ಮಂಡ್ಯ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ ಗೆ ಬಿಟ್ಟುಕೊಟ್ಟರೂ, ಸುಮಲತಾ ಅಂಬರೀಶ್‌ ಸ್ಪರ್ಧೆ ಖಚಿತ. ಸುಮಲತಾ ಅವರ ಅವಶ್ಯಕತೆ ಇದ್ದರೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಏನೇ ಬದಲಾವಣೆಯಾದರೂ ಸುಮಲತಾ ಅಂಬರೀಶ್‌ ಅವರು ಕಣದಲ್ಲಿರುತ್ತಾರೆ. ಸಂಸದರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

andolanait

Recent Posts

ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಸುಲಭ ಜಯ

ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…

6 hours ago

ಟಿ20 ವಿಶ್ವಕಪ್ | ಭರ್ಜರಿ ಜಯ ; ಶ್ರೀಲಂಕಾ ಸೋಲಿಸಿ ಸೂಪರ್ 8ಗೆ ಲಗ್ಗೆ ಇಟ್ಟ ಜಿಂಬಾಬ್ವೆ

ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಮತ್ತೊಮ್ಮೆ ದೊಡ್ಡ ಅಚ್ಚರಿ ಮೂಡಿಸಿದೆ. ಆತಿಥೇಯ ಶ್ರೀಲಂಕಾವನ್ನು ಆರ್.…

6 hours ago

ದ್ವಿತೀಯ ಪಿಯುಸಿ | ಮೈಸೂರು ಟಾಪ್‌ 10ರೊಳಗೆ ಸ್ಥಾನ ಪಡೆಯಲು ಶ್ರಮಿಸಿ

ಮೈಸೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಜತೆಗೆ 10ನೇ ಸ್ಥಾನದೊಳಗೆ ಬರಲು ಶ್ರಮಿಸಬೇಕು.…

6 hours ago

ಎಐ ಭಾರತದ ಭವಿಷ್ಯ ; ನಿಯಂತ್ರಣ ನಮ್ಮ ಕೈಯಲ್ಲಿರಲಿ : ಪ್ರಧಾನಿ ಮೋದಿ

ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…

7 hours ago

ಬಂಡೀಪುರ ಸಫಾರಿ ಪರ-ವಿರೋಧ ಜಟಾಪಟಿ ; ರೈತರು, ಸಫಾರಿ ಬೆಂಬಲಿತರು ಪೊಲೀಸರ ವಶಕ್ಕೆ.

ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ…

7 hours ago

ಬೂದನೂರು ಉತ್ಸವ : ನಾಳೆಯಿಂದ ಹೆಲಿ ಟೂರಿಸಂ

ಮಂಡ್ಯ : ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಫೆ.20ರ ಶುಕ್ರವಾರದಿಂದ ಮೂರು ದಿನಗಳ ಕಾಲ ಹೆಲಿ ಟೂರಿಸಂ (ಹೆಲಿಕಾಪ್ಟರ್ ಜಾಯ್…

7 hours ago