ಮೈಸೂರು: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಕುಟುಂಬದವರು ಆತನ ಅಂಗಾಗಗಳನ್ನು ದಾನ ಮಾಡಿದ್ದಾರೆ.
ಇತ್ತೀಚೆಗೆ ಹುಣಸೂರಿನ ಬಿಳಿಕೆರೆ ಬಳಿ ಅಪಘಾತಕ್ಕಿಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಲೋಹಿತ್ ಅವರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಸಿಟಿ ಸ್ಕ್ಯಾನಿಂಗ್ ಮಾಡಿಸಿದಾಗ ಮೆದಳಿನ ಕಾಂಡ ಇನ್ಪಾರ್ಕ್ಟ್ ಗೋಚರಿಸಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೆ.೩೦ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ ಅಪೋಲೊ ಬಿಜಿಎಸ್ ವೈದ್ಯರು ಅವರ ಅಂಗಾಗ ದಾನಕ್ಕೆ ಕುಟುಂಬದವರಿಗೆ ಸಲಹೆ ನೀಡಿದಾಗ. ಇದಕ್ಕೆ ಲೋಹಿತ್ ಕುಟುಂಬದವರು ಒಪ್ಪಿಗೆ ಸೂಚಿಸಿದರು. ಅದರಂತೆ ಲೋಹಿತ್ ಅವರ ಅಂಗಾಗಗಳನ್ನು ದಾನ ಮಾಡಲಾಗಿದೆ ಎಂದು ಅಪೋಲೊ ಬಿಜಿಸ್ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ. ಭರತೀಶ ರೆಡ್ಡಿ ತಿಳಿಸಿದ್ದಾರೆ.
ಅಂಗಾಂಗ ದಾನ ಪಡೆದ ಆಸ್ಪತ್ರೆಗಳು: ಬೆಂಗಳೂರಿನ ಎನ್ಎಚ್ಗೆ ಹೃದಯ, ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಲಿವರ್, ಒಂದು ಕಿಡ್ನಿ ಮತ್ತು ಮೇದೋಜಿರಕ ಗ್ರಂಥಿ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ಗೆ ಒಂದು ಕಿಡ್ನಿ, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಾರ್ನಿಯಾಸ್ ದಾನ ಮಾಡಲಾಗಿದೆ.