ಗುತ್ತಿಗೆ ಆಧಾರದ ಮಹಿಳಾ ನೌಕರರಿಗೂ ಮಾತೃತ್ವ ರಜೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ ಮತ್ತು ಇತರ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೂ ಸಹ ರಜೆ ಸೌಲಭ್ಯವನ್ನು ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಯೋಜನೆಯ ಜಾರಿ ಯಾವಾಗಿನಿಂದ ?

ಈ ಯೋಜನೆಯು ಏಪ್ರಿಲ್ ತಿಂಗಳಿನಿಂದ ರಾಜ್ಯದ್ಯಂತ ಜಾರಿಗೆ ಬರಲಿದೆ. ಗರಿಷ್ಠ 180 ದಿನಗಳವರೆಗೆ ರಜೆಯನ್ನು ಮಂಜೂರು ಮಾಡಬಹುದಾಗಿದೆ. ಗರ್ಭಪಾತ ಸಂದರ್ಭದಲ್ಲಿ ಮಾತೃತ್ವ ರಜೆ ಯೂ 6 ವಾರಗಳನ್ನು ಮೀರಬಾರದು ಎಂದು ತಿಳಿಸಲಾಗಿದೆ.

ಮಾತೃತ್ವ ರಜೆ ಪಡೆಬೇಕಾದಂತಹ ಮಹಿಳೆಯು ಅರ್ಜಿಗಳನ್ನು ನೊಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರ ದಿಂದ ದೃಢೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹಿಳೆಯು ಪಡೆಯುವ ಮಾತೃತ್ವ ರಜೆ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವ ದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮಾನವಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಾಗಿರುತ್ತಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ರಜಾ ಯೋಜನೆಯು ಅನ್ವಯವಾಗುವುದಿಲ್ಲ. ಇದರ ಜೊತೆಗೆ ಗುತ್ತಿಗೆ ಅವಧಿಯ ವೇಳೆ ಮಾತೃತ್ವ ರಜೆಯ ಮೇಲೆ ತೆರಳಿದಾಗ ಅವರ ಗುತ್ತಿಗೆ ಅವಧಿ ಮುಕ್ತಾಯವಾದರೆ ಅಲ್ಲಿಯವರೆಗೆ ಮಾತ್ರ ರಜೆ ಸೀಮಿತಗೊಂಡಿರುತ್ತದೆ. ಒಂದುವೇಳೆ ಗುತ್ತಿಗೆ ಅವಧಿ ವಿಸ್ತರಿಸಿದರೆ ಗರಿಷ್ಠ 180 ದಿನಗಳ ಮಾತೃತ್ವ ರಜೆ ಪಡೆಯಲು ಮಹಿಳಾ ನೌಕರರು ಅರ್ಹರಾಗಿರುತ್ತಾರೆ.