ರಾಜ್ಯಪಾಲರಿಂದ ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನಕ್ಕೆ ಚಾಲನೆ

ಬೆಂಗಳೂರು: 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ಮಾತಾಡ್ ಮಾತಾಡ್ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮ ರಾಜಭವನದಲ್ಲಿ ನಡೆಯಲಿದೆ.

ಕನ್ನಡವನ್ನು ಬಳಸಿ, ಬೆಳೆಸಿ ಎನ್ನುವ ಆಶಯದೊಂದಿಗೆ ಆರಂಭವಾದ ಈ ಅಭಿಯಾನಕ್ಕೆ ಅ.28 ರ ಸಂಜೆ 6.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರು ಸ್ವತಃ ಕನ್ನಡದಲ್ಲಿ ಅಭಿಯಾನದ ಸಂದೇಶ ನೀಡುವುದರ ಮೂಲಕ ಚಾಲನೆ ನೀಡಲಿದ್ದಾರೆ.
launching-a-special-campaign-for-kannada-for-us-by-the-governor
“ಮಂಗಳೂರಿನ ಆಳ್ವಾಸ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭರತನಾಟ್ಯದಲ್ಲಿ ‘ನವದುರ್ಗೆ’ ಹಾಗೂ ಯಕ್ಷಗಾನದಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ಪ್ರಸಂಗ ಪ್ರಸ್ತುತ ಪಡಿಸಲಿದ್ದಾರೆ. ಬೆಂಗಳೂರಿನ ಮಂಜುಳಾ ಪರಮೇಶ್ವರ ಮತ್ತು ತಂಡದವರಿಂದ ಹಲವು ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ” ವಿ.ಸುನೀಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

× Chat with us