ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಖ್ಯಾತ ಗಾಯಕ ಲಕ್ಕಿ ಅಲಿ ಗಂಭೀರ ಆರೋಪ ಮಾಡಿ, ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರಿನ ನ್ಯೂ ಯಲಹಂಕ ಟೌನ್ ಬಳಿ ಇರುವ ಟ್ರಸ್ಟ್‌ನ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ವಿರುದ್ಧ ದೂರು ನೀಡಿದ್ದು, ದೂರಿನ ಪ್ರತಿಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್‌ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ಗಳನ್ನು ಮಾಡಿರು ಲಕ್ಕಿ ಅಲಿ, ಈ ಬಗ್ಗೆ ಎಸಿಪಿಯವರಿಗೆ ದೂರು ನೀಡಿದ್ರೂ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಸ್ಥಳೀಯ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ. ರೋಹಿಣಿ ಸಿಂಧೂರಿ ಕುಟುಂಬದ ಕಡೆಯೇ ನಿಂತಿದ್ದಾರೆ. ನಾವು ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಯಲಹಂಕ ನ್ಯೂಟೌನ್ ಕೆಂಚೇನಹಳ್ಳಿ ಬಳಿ ಇರುವ ತಮ್ಮ ಜಮೀನು ಕಬಳಿಸಲು ರೋಹಿಣಿ ಸಿಂಧೂರಿ ಹಾಗೂ ಪತಿ ಸುಧೀರ್ ರೆಡ್ಡಿ ಸೇರಿದಂತೆ ಯಲಹಂಕ ಉಪವಿಭಾಗದ ಎಸಿಪಿ ಮಂಜುನಾಥ್, ಸರ್ವೇಯರ್ ಅಧಿಕಾರಿ ಮನೋಹರ್ ಸೇರಿದಂತೆ 6 ಮಂದಿ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಅಂದಿನ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರಿಗೆ ಟ್ಯಾಗ್ ಮಾಡಿದ್ದರು. ನ್ಯೂ ಯಲಹಂಕ ಟೌನ್ ಬಳಿಯಿರುವ ತಮ್ಮ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಗೆ ರೋಹಿಣಿ ಸಿಂಧೂರಿಯವರು ಸಹಕಾರ ಕೊಟ್ಟಿದ್ದು ಆ ಮೂಲಕ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಮತ್ತೆ ತಮ್ಮ ಟ್ರಸ್ಟ್ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಹಗರಣದಲ್ಲಿ ಯಲಹಂಕ ಎಸಿಪಿ ಮಂಜುನಾಥ್, ಸರ್ವೇಯರ್ ಮನೋಹನ್ ಶಾಮೀಲು ಆಗಿರುವ ಆರೋಪ ಮಾಡಿದ್ದಾರೆ.
ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…
‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…
ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…