ಸಿಎಂ ಸೂಚಿಸಿದ್ರೆ ಸೋಮವಾರದಿಂದಲೇ ಬಸ್‌ ಸಂಚಾರ ಆರಂಭಿಸ್ತೀವಿ: ಲಕ್ಷ್ಮಣ ಸವದಿ

ಬೆಂಗಳೂರು: ಮುಖ್ಯಮಂತ್ರಿಗಳು ಸೂಚನೆ ನೀಡಿದರೆ, ಕೋವಿಡ್‌ ನಿಯಮಾನುಸಾರ ಸೋಮವಾರದಿಂದಲೇ (ಜೂ.21) ಬಸ್‌ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಜೂ.21ರ ನಂತರ ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ ಸಂಬಂಧ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಶನಿವಾರ) ಸಂಜೆ ಸಭೆ ನಡೆಯಲಿದೆ. ಬಸ್‌ ಸಂಚಾರ ಆರಂಭದ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಿಎಂ ಸೂಚನೆ ಮೇರೆಗೆ ಅಗತ್ಯ ಮುಂಜಾಗ್ರತೆ ಕ್ರಮಗಳೊಂದಿಗೆ ಬಸ್‌ ಸಂಚಾರಕ್ಕೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವ ಯೋಚನೆಯಿದೆ. ಕೊರೊನಾ ಕಡಿಮೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅವಕಾಶ ನೀಡುತ್ತೇವೆ. ಸಿಬ್ಬಂದಿಯೂ ಕೋವಿಡ್‌ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

× Chat with us