ಕೊಡಗರಹಳ್ಳಿ- ಚಿಕ್ಲಿಹೊಳೆ ರಸ್ತೆ ದುರಸ್ತಿಗೆ ಮತ್ತೆ ಆಗ್ರಹ

ಸುಂಟಿಕೊಪ್ಪ: ಕಂಬಿಬಾಣೆ, ೭ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾಮಸ್ಥರು ಕೊಡಗರಹಳ್ಳಿ, ಚಿಕ್ಲಿಹೊಳೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ರಸ್ತೆತಡೆ ಚಳವಳಿಗೆ ಪೊಲೀಸರು ಅನುಮತಿ ನೀಡದ ಕಾರಣ ಸಾಂಕೇತಿಕವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ನೀಡಲು ನಿರ್ಧರಿಸಿ, ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತೀರ್ವಾನ ಕೈಗೊಂಡಿದ್ದಾರೆ.
ಹೋರಾಟ ಸಮಿತಿ ಸಂಚಾಲಕ ಲವಶಾಂತಪ್ಪ ವಾತನಾಡಿ, ಹದಗೆಟ್ಟು ಹೋಗಿರುವ ರಸ್ತೆ ದುರಸ್ತಿ ಕಾಮಗಾರಿಗೆ ಸೆ. ೧೫ರಂದು ಕಾವೇರಿ ನೀರಾವರಿ ನಿಗಮದ ಅಭಿುಂಂತರರಿಗೆ ಮನವಿ ಸಲ್ಲಿಸಲಾಗಿತ್ತು. ಅಂದು ಒಂದು ವಾರದ ಒಳಗೆ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರೆಗೆ ಏನೂ ಕ್ರಮ ಕೈಗೊಂಡಿಲ್ಲ. ಮತ್ತೆ ಮನವಿ ಸಲ್ಲಿಸಿದಾಗ ರಸ್ತೆ ದುರಸ್ತಿತಿಗೆ ಸರ್ಕಾರದಿಂದ ಹಣ ಬಿಡುಗಡೆಾಂಗಿಲ್ಲ ಎಂಬ ಉತ್ತರ ನೀಡಿದ್ದಾರೆ. ರಸ್ತೆ ಸರಿ ಇಲ್ಲದ ಕಾರಣ ಬಸ್ ಸಂಚಾರವಿಲ್ಲದೆ ಕೂಲಿ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ನಾವು ಪಕ್ಷಾತೀತವಾಗಿ ಹೋರಾಟ ವಾಡುತ್ತಿದ್ದೇವೆ. ಕೂಡಲೇ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಚಾಲಕ ಲವ ಶಾಂತಪ್ಪ, ಸುಭಾಷ್ ುುಂವಕ ಸಂಘದ ಅಧ್ಯಕ್ಷ ಗಣೇಶ, ಗ್ರಾ.ಪಂ. ವಾಜಿ ಸದಸ್ಯ ಅಬ್ದುಲ್ಲಾ, ಜವಹರ್, ವಾಜಿ ಗ್ರಾ.ಪಂ. ಅಧ್ಯಕ್ಷ ಚಂದ್ರಹಾಸ ರೈ, ಆಟೋ ಚಾಲಕರು, ವಾಹನಗಳ ಚಾಲಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

× Chat with us