ಇಂದು ( ಡಿಸೆಂಬರ್ 21 ) ವಿಧಾನಸಭೆಯಲ್ಲಿ ಸಚಿವ ಸಂಪುಟ ನಡೆದಿದ್ದು, ಸಭೆಯಲ್ಲಿ ಗೃಹಬಳಕೆ ನೀರಿಗೆ ಪ್ರತಿ ಎಂಸಿಎಫ್‌ಟಿಗೆ 320 ರೂಪಾಯಿ ರಾಜಧನ ಅನುಮೋದನೆಯಾಗಿದೆ. ಕಾಲುವೆಗಳು, ಜಲಾಶಯ, ಇತ್ಯಾದಿಗಳಿಂದ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್‌ಟಿಗೆ 3 ಲಕ್ಷ ರೂ ರಾಜಧನ ಸಂಗ್ರಹಿಸಲು ಅನುಮೋದನೆಯಾಗಿದೆ.
ಸಭೆಯ ಬಳಿಕ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಹಾಗೂ ಜಮೀರ್ ಅಹಮದ್ ಖಾನ್ ಸಭೆಯ ಪ್ರಮುಖ ನಿರ್ಣಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬುಡಕಟ್ಟು ಪಂಗಡಗಳಿಗೆ ಉಚಿತ ಆಹಾರ ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ 120 ಕೋಟಿ ರೂ ಅನುಮೋದನೆ ದೊರೆತಿದೆ ಎಂದು ಎಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದಾರೆ.
11 ಬುಡಕಟ್ಟು ಪಂಗಡಗಳಾದ ಕೊರಗ, ಸೋಲಿಗ, ಜೇನು ಕುರುಬ, ಕಾಡು ಕುರುಬ, ಎಡವ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಹಾಗೂ ಬೆಟ್ಟ ಕುರುಬ ಕುಟುಂಬಗಳಿಗೆ 12 ತಿಂಗಳು ಉಚಿತ ಪೌಷ್ಠಿಕ ಆಹಾರ ನೀಡಲಾಗುವುದು ಎಂದು ಹೇಳಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 450, ಕೆಎಸ್‌ಆರ್‌ಟಿಸಿಯಿಂದ 300 ಸರ್ಕಾರಿ ಬಸ್‌ಗಳ ಕಾರ್ಯಾಚರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೈಸೂರು ನಗರದಲ್ಲಿ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿ ಮುಡಾ ವತಿಯಿಂದ ಅಭಿವೃದ್ಧಿಗೆ ಅನುಮೋದನೆ.
ನಗರ ಸಾರಿಗೆ ನಿಧಿಯಡಿ ಮಂಜೂರಾಗಿರುವ ಅನುದಾನದಿಂದ ಬಿಎಂಟಿಸಿ ಅನುಮೋದಿತ 20 ಎಲೆಕ್ಟ್ರಿಕ್ ಮಿನಿ ಬಸ್ ಖರೀದಿಸುವ ಬದಲು 20 ಎಸಿ ರಹಿತ ಎಲೆಕ್ಟ್ರಿಕ್ ಬಸ್ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯ ಕಾರ್ಯಯೋಜನೆ ಹಮ್ಮಿಕೊಳ್ಳಲು ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧಾರ ಮಾಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ರಾಷ್ಟ್ರೀಯ ವಿವಿಧ ರೋಗಗಳ ಪತ್ತೆ ಹಚ್ಚಲು, ಲ್ಯಾಬೋರೇಟರಿಗಳಿಗೆ ಪರಿಕರ ಖರೀದಿಗೆ ಆರೋಗ್ಯ ಇಲಾಖೆ ಮೂಲಕ 15 ಲಕ್ಷ ಬಿಡುಗಡೆಗೆ ಒಪ್ಪಿಗೆ
ನಗರದಲ್ಲಿ ಸಂಚಾರಿ ಸಿಗ್ನಲ್ ವ್ಯವಸ್ಥೆ ಉನ್ನತೀಕರಿಸಲು ಹಾಗೂ ಅಡಾಪ್ಟಿವ್ ಸಂಚಾರ ವ್ಯವಸ್ಥೆ ಅಳವಡಿಕೆಗೆ, ನಿಯಂತ್ರಣಕ್ಕೆ ಐದು ವರ್ಷಗಳ ಅವಧಿಗೆ 56.54 ಕೋಟಿ ವೆಚ್ಚಕ್ಕೆ ಒಳಾಡಳಿತ ಇಲಾಖೆಗೆ ಹಣ ಬಿಡುಗಡೆ.
ಕಾಲೇಜು ಶಿಕ್ಷಣ ಇಲಾಖೆ 449 ಸಿಬ್ಬಂದಿ ಕೊರತೆ ಇದೆ. ಹೊರಗುತ್ತಿಗೆ ಮೂಲಕ ನೇಮಕ ಮಾಡಲು ಅನುಮೋದನೆ. 11ಕೋಟಿ ವೆಚ್ಚವಾಗಲಿದ್ದು ಹೊರ ಗುತ್ತಿಗೆಯಲ್ಲಿ ಸರ್ಕಾರ ರಿಸರ್ವೇಷನ್ ತರಲು ನಿರ್ಧರಿಸಿದೆ. ಹೈದ್ರಾಬಾದ್ ಕರ್ನಾಟಕ ರಿಸರ್ವೇಷನ್ ಸೇರಿದಂತೆ ಎಲ್ಲಾ ರಿಸರ್ವೇಷನ್ ಇರಲಿದೆ.
ಕಾನೂನು ಮತ್ತು ನೀತಿ ಪೇಪರ್ ಕ್ಯಾಬಿನೆಟ್ ನಲ್ಲಿ ಸುಧೀರ್ಘ ಚರ್ಚೆಯಾಗಿದೆ. ಸಿಎಂ ಬದಲಾವಣೆ ಮತ್ತು ಸೇರ್ಪಡೆಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲು ನಿರ್ಧಾರ. ಕ್ರಿಮಿನಲ್ ಜಸ್ಟೀಸ್ ಸೇರಿದಂತೆ ಹಲವು ವಿಚಾರಗಳನ್ನು ಒಳಗೊಂಡಿದೆ. ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಚರ್ಚೆಗೆ ಬರಲಿದೆ.
ವಸತಿ ಇಲಾಖೆಗೆ ಸಂಬಂಧಿಸಿದ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ವಸತಿ ಯೋಜನೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಸತಿ ಇಲಾಖೆಗೆ 500 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. 6,170 ಕೋಟಿ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಂತ ಹಂತವಾಗಿ ಹಣ ನೀಡಲಿದೆ. ಮೊದಲ ಹಂತದಲ್ಲಿ 48,786 ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಣ ನೀಡಲಿದೆ. 1 ಲಕ್ಷದ 80 ಸಾವಿರ ಮನೆ ನೀಡಲು ನಿರ್ಧಾರ.
ಸರ್ಕಾರದ 6ನೇ ಗ್ಯಾರೆಂಟಿಯಾಗಿ ವಸತಿ ಯೋಜನೆಗೆ ಹಣ, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಹಿಂದಿನ ಎಲ್ಲಾ ಇಲಾಖೆ ಕೆಲಸ ಮುಗಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ
2015-23ರವರೆಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ 1,80,253 ಮನೆಗಳ ಪೈಕಿ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತೀ ವರ್ಷ ಮಂಜೂರಾಗಿತ್ತು. 2018ರಿಂದ ಒಂದೂ ಮನೆ ಮಂಜೂರಾಗಿಲ್ಲ, ಬೆನಿಫಿಷರಿಗೆ ಹಣ ಕೊಟ್ಟಿರಲಿಲ್ಲ. ಇದನ್ನು ಹೊಸ ಸರ್ಕಾರ ಬಂದ ಬಳಿಕ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ. ಈಗ ಮನೆ ಪಡೆಯುವವರು ಒಂದು ಲಕ್ಷ ಕಟ್ಟಿದರೆ ಸಾಕು. ಸರ್ಕಾರ ಈಗ 500 ಕೋಟಿ ಹಣ ಬಿಡುಗಡೆಗೆ ಒಪ್ಪಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡೋದಾಗಿ ಸಿಎಂ ಹೇಳಿದ್ದಾರೆ.
ಕೇಂದ್ರ ಒಂದೂವರೆ ಲಕ್ಷ ಹಣ ಕೊಡ್ತಿದೆ. ಆದ್ರೆ ಕೇಂದ್ರ ಸರ್ಕಾರ GST ಮುಖಾಂತರ ವಾಪಸ್ ತೆಗೆದುಕೊಳ್ತಿದೆ. 1,80,000 ಮನೆಗಳು ಸಿದ್ದವಾಗಿದ್ದು, ಒಂದೂ ಮನೆಯನ್ನ ಕೊಡಲಾಗಿರಲಿಲ್ಲ. ಮನೆ ಪಡೆಯುವವರು ನಾಲ್ಕುವರೆ ಲಕ್ಷ ಕೊಡಬೇಕಿತ್ತು. ಈಗ ಬೆನಿಫಿಷರಿಗಳು ಒಂದು ಲಕ್ಷ ಕೊಟ್ರೆ ಸಾಕು ಎಂದು ಹೇಳಿಕೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಜಂಟಿ ಅಧಿವೇಶನ ನಡೆಸುವ ಬಗ್ಗೆ ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆದಿದ್ದು, ಸಿಎಂ ಅವರು ಜಂಟಿ ಅಧಿವೇಶನ ಹಾಗೂ ಬಜೆಟ್ ಸೆಷನ್‌ನ ದಿನಾಂಕ ನಿಗಧಿ ಮಾಡ್ತಾರೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
HAL ಸಂಸ್ಥೆ 91.59 ಕೋಟಿ, HMT 3.79 ಕೋಟಿ ಬಾಕಿ ಕಟ್ಟಿಸಿಕೊಳ್ಳಲಾಗಿದೆ. ಅದೇ ರೀತಿ 448 ಸ್ವತ್ತುಗಳಿಂದ 234 ಕೋಟಿ ಸಂಗ್ರಹ ಮಾಡುವ ಗುರಿ ಇದೆ. ಸಾವಿರಾರು ಕೋಟಿ ಬಾಕಿ ಇದೆ. ಅದರ ಬಾಕಿ ಕಟ್ಟಿಸಿಕಳ್ಳಲು ನಿರ್ಧಾರ ಮಾಡಲಾಗಿದೆ.
ಸರ್ಕಾರದ ಹಣ ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟ ಪ್ರಕರಣ ಹಲವು ದಿನಗಳಿಂದ ಬಾಕಿ ಇದೆ, ಅದನ್ನು ಗುರುತಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದು ಹಣ ವಾಪಸ್ ತರಲು ಕ್ಯಾಬಿನೆಟ್ ಸಬ್ ಕಮಿಟಿ ರಚನೆ.
ಕೋಟ್ಯಾಂತರ ಹಣವನ್ನ ಅಧಿಕಾರಿಗಳು ದುರುಪಯೋಗ ಮಾಡಿರೋ ಮಾಹಿತಿ ಇದ್ದು, ಹಿಂದೆ 680 ಕೋಟಿ ಇದೇ ರೀತಿ ಪತ್ತೆ ಹಚ್ಚಲಾಗಿತ್ತು. ಈಗ ಮತ್ತೆ ಅಂತಹ ಪ್ರಕರಣ ತನಿಖೆ ನಡೆಯಲಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…