ಸಿಐಎಎಲ್‌ಗೆ ಕೇರಳದ ಶೈಲಜಾ ಟೀಚರ್ ಭೇಟಿ

ಮೈಸೂರು: ಭವಿಷ್ಯದ ಶೈಕ್ಷಣಿಕ ಬೆಳವಣಿಗೆ ಹಿತದೃಷ್ಟಿಯಿಂದ ಭಾಷಾ ಸಂಪಾದನೆಯಲ್ಲಿ ಭಾಷಾ ಪ್ರಯೋಗಾಲಯದ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರದ ಜತೆಗೂಡಿ ಕೆಲಸ ಮಾಡುವೆ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಮತ್ತು ಹಾಲಿ ಶಾಸಕಿ ಕೆ.ಕೆ.ಶೈಲಜಾ ಟೀಚರ್ ಹೇಳಿದರು.

ಕಳೆದ ಸೋಮವಾರ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ಗೆ ಭೇಟಿ ನೀಡಿದ್ದ ವೇಳೆ ಸಿಐಐಎಲ್ ಮತ್ತು ಎಸ್‌ಆರ್‌ಎಲ್‌ಸಿನ ಭಾಷಾ ಅಧ್ಯಾಪಕರೊಂದಿಗೆ ಚರ್ಚೆ ನಡೆಸಿದರು. ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆ, ಸಂಶೋಧನಾ ಕಾರ್ಯಗಳನ್ನು ವೀಕ್ಷಿಸಿದರು. ಶೈಕ್ಷಣಿಕ ಅಭಿವೃದ್ಧಿ, ಭಾಷಾ ಪ್ರಯೋಗಾಲಯದ ಸ್ಥಾಪನೆ, ವೃತ್ತಿ ಮಾರ್ಗದರ್ಶನ, ಕೌನ್ಸೆಲಿಂಗ್ ಕೋಶ ಮತ್ತು ಹೊಸ ಶಾಲಾ ವ್ಯವಸ್ಥೆಯ ವಿಸ್ತೃತವಾಗಿ ಚರ್ಚಿಸಿದರು.

ಸಿಐಐಎಲ್‌ನ ಸಹಾಯಕ ನಿರ್ದೇಶಕ ಡಾ. ನಾರಾಯಣ ಕುಮಾರ್ ಚೌಧರಿ, ಎಸ್‌ಆರ್‌ಎಲ್‌ಸಿ ಪ್ರಾಂಶುಪಾಲ ಡಾ. ರಾಕೇಶ್ ಚೆರುಕೋಡು, ಎಂ. ವೆಂಕಟೇಶನ್ ಮತ್ತಿತರರು ಹಾಜರಿದ್ದರು.

× Chat with us