ರಾಜ್ಯ

ಕೆಂಪೇಗೌಡ ಬಡಾವಣೆ ಕಾಮಗಾರಿ: ಶಾಸಕ ಎಸ್‌ಟಿ ಸೋಮಶೇಖರ್‌ ಶ್ಲಾಘನೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಶ್ಲಾಘಿಸಿದ್ದಾರೆ.

ವಿಧಾನಸೌದದಲ್ಲಿ ಫೆ.6 ರಂದು ನಡೆದ ಅರ್ಜಿ ಸಮಿತಿ ಸಭೆಯಲ್ಲಿ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಯನ್ನು ನಾನು ಪರಿಶೀಲಿಸಿದ್ದು, ಈಗಾಗಲೇ ಬ್ಲಾಕ್-5 , 6, 7ರಲ್ಲಿ ಆಂತರಿಕ ರಸ್ತೆಗಳ ಡಾಂಬರೀಕರಣ ಬಹುತೇಕ ಪೂರ್ಣಗೊಂಡಿದೆ. ನಿವೇಶನದಾರರು ಮನೆ ನಿರ್ಮಾಣ ಮಾಡಲು ಮುಂದಾಗುತ್ತಿಲ್ಲಾ ಆದರೂ ಪ್ರಾಧಿಕಾರದ ಉಳಿದ ಬ್ಲಾಕ್‌ಗಳಲ್ಲಿ ಸುಮಾರು ಅಂದಾಜು ಮೊತ್ತ ರೂ 200. ಕೋಟಿಗೆ ಬಡಾವಣೆಯ ಆಂತರಿಕ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಮುಂದಾಗಿದೆ ಎಂದು ಶ್ಲಾಘಿಸಿದ್ದಾರೆ.

ಕೆಂಪೇಗೌಡ ಬಡಾವಣೆಯು ನನ್ನ ಮತ ಕ್ಷೇತ್ರದಲ್ಲಿರುವ ಬಡಾವಣೆಯಾಗಿದ್ದು ಯಾವುದೇ ಕುಂದುಕೊರತೆಗಳಿದ್ದರೇ ಇಲಾಖೆಯವರಿಂದ ಪರಿಹರಿಸುವುದಾಗಿ ತಿಳಿಸಿದರು.

ಪ್ರಾಧಿಕಾರದವರು ಸಮಿತಿಯ ಸಭೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಆಗಿರುವ ಪ್ರಗತಿಯ ವಿವರವನ್ನು ಮುಂದಿನ ಸಭೆಗೆ ಸಲ್ಲಿಸಿ, ಈ ಅರ್ಜಿಯನ್ನು ಅಂತಿಮಗೊಳಿಸಬೇಕಾಗಿ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರಲ್ಲಿ ಕೋರಿದರು.

ಒಟ್ಟಾರೆಯಾಗಿ ಬಡಾವಣೆಯ ಕೆಲಸ ಹಾಗೂ ಎಂ.ಎ.ಆರ್ ರಸ್ತೆಯ ಕೆಲಸದಲ್ಲಿ ಪ್ರಗತಿಯಾಗಿದೆಯೆಂದು ತಿಳಿಸಿದರು. ಈ ಮಧ್ಯೆ ಶಾಸಕರಾದ ಸುರೇಶ್ ಕುಮಾರ್ ರವರು ಮಾತನಾಡುತ್ತಾ, ಸದರಿ ಬಡಾವಣೆಯಲ್ಲಿ ರಸ್ತೆ ಅಗೆಯದಂತೆ, ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪ್ರಾಧಿಕಾರವು ನಿವೇಶನದಾರರಿಂದ ಪಡೆಯುತ್ತಿರುವ ಮೊತ್ತ ಅಧಿಕವಾಗಿದ್ದು, ಮತ್ತೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಶಾಸಕರಾದ ಯು.ಬಿ. ಬಣಕಾರ್, ಸಿ.ಎನ್.ಬಾಲಕೃಷ್ಣ, ಮಂಥರ್ ಗೌಡ, ಡಾ.ಅವಿನಾಶ್‌ ಜಾಧವ್, ಎಚ್.ಡಿ.ತಮ್ಮಯ್ಯ ಹಾಗೂ ಇತರರು ಇದ್ದರು.

ಆಂದೋಲನ ಡೆಸ್ಕ್

Recent Posts

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

8 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

8 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

8 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

9 hours ago

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ನಿಧನ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…

11 hours ago

ರಾಜ್ಯದಲ್ಲಿ ಮತ್ತೆರಡು ದಿನ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರ್ಗಿ,…

12 hours ago