ತಿ. ನರಸೀಪುರ : ಕಾವೇರಿ ಜಲಾನಯನ ಪ್ರದೇಶದಲ್ಲಿ ವರ್ಣನ ಆರ್ಭಟ ಮುಂದುವರೆದಿದ್ದು ಜೀವನಾಡಿ ಕನ್ನಂಬಾಡಿ ಕಟ್ಟೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.
ಅಣೆಕಟ್ಟೆಯಿಂದ 75,000 ಸಾವಿರಕ್ಕೂ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದಲ್ಲದೆ ಕಬಿನಿ ಜಲಾಶಯವು ಬರ್ತಿಗೊಂಡಿದ್ದು, ಜಲಾಶಯದಿಂದ ಕಪಿಲಾ ನದಿಗೆ ಹೆಚ್ಚು ನೀರು ಹರಿದು ಬರುತ್ತಿದ್ದು, ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಸಮೀಪದ ಮೆಟ್ಟಿಲುಗಳು ಜಲಾವೃತಗೊಂಡಿದೆ.
ತಿರುಮಕೂಡಲಿನ ಅಗಸ್ತೇಶ್ವರ ಹಾಗೂ ಶ್ರೀ ಗುಂಜಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಗಳ ಬಳಿ ಕಾವೇರಿ – ಕಪಿಲ ನದಿಗೆ ಇಳಿಯಲು ಮೆಟ್ಟಿಲುಗಳು ನಿರ್ಮಾಣ ಮಾಡಿದ್ದರು, ಬಹುತೇಕ ಮೆಟ್ಟಿಲುಗಳು ಮುಳುಗಡೆಗೊಂಡಿವೆ, ಆದರೂ ಸಹ ಸಾರ್ವಜನಿಕರು ಸ್ನಾನ ಮಾಡುವುದನ್ನು ನಿಲ್ಲಿಸಿಲ್ಲ, ಇದರಿಂದ ಅಪಘಡಗಳು ಸಂಭವಿಸುವ ಸಾಧ್ಯತೆಗಳಿವೆ.