ರಾಜ್ಯ

ಫೆಬ್ರವರಿ 12ರಿಂದ ವಿಧಾನಮಂಡಲ ಅಧಿವೇಶನ; ರಾಜ್ಯ ಬಜೆಟ್‌ ಮಂಡನೆ ದಿನಾಂಕ ಘೋಷಣೆ

ಫೆಬ್ರವರಿ 12ರಿಂದ 23ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಫೆಬ್ರವರಿ 16ರಂದು ಬಜೆಟ್‌ ಮಂಡನೆಯಾಗಲಿದೆ.

ವಿಧಾನಮಂಡಲ ಅಧಿವೇಶನದ ಮೊದಲ ದಿನ ( ಫೆಬ್ರವರಿ 12 ) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭಾಷಣ ಮಾಡಲಿದ್ದಾರೆ. ಮುಂದೆ ಲೋಕಸಭೆ ಚುನಾವಣೆ ಬರಲಿದ್ದು ಮಾರ್ಚ್‌ ತಿಂಗಳಿನಿಂದಲೇ ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿಯೇ ಬಜೆಟ್‌ ಮಂಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

ಇನ್ನು ಮುಂಬರುವ ಲೋಕಸಭೆ ಚುನಾವಣೆಯನ್ನು ತಲೆಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಏನೆಲ್ಲಾ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಬಹುದು ಎಂಬ ಕುತೂಹಲ ಉಂಟಾಗಿದೆ. ಮತ್ತೊಂದೆಡೆ ಸರ್ಕಾರದಲ್ಲಿ ಈಗಾಗಲೇ ಅನುದಾನದ ಕೊರತೆ ಉಂಟಾಗಿದ್ದು ಹೊಸ ಹೊಸ ಘೋಷಣೆಯನ್ನು ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.

andolana

Recent Posts

ಕ್ರಿಕೆಟ್‌ ಪಂದ್ಯಾವಳಿ ವೇಳೆ ಜೇನುನೊಣಗಳ ದಾಳಿ: ಅಂಪೈರ್‌ ದಾರುಣ ಸಾವು

ಉನ್ನಾವೋ: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದ ಪರಿಣಾಮ 65 ವರ್ಷದ ಅಂಪೈರ್ ಸಾವನ್ನಪ್ಪಿದ್ದು, ಹಲವಾರು ಆಟಗಾರರು…

13 mins ago

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 23.8 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23.8 ಕೋಟಿ ರೂ ಮೌಲ್ಯದ ಕೊಕೇನ್‌ ಸೀಜ್‌ ಮಾಡಲಾಗಿದೆ. ಎನ್‌ಸಿಬಿ ಅಧಿಕಾರಿಗಳು…

54 mins ago

ನಾಳೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಚಿತ್ರದ 2ನೇ ಟೀಸರ್‌ ರಿಲೀಸ್‌

ಬೆಂಗಳೂರು: ಕೆಜಿಎಫ್‌-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ…

3 hours ago

ದಲಿತರು ಯಾಕೆ ಮುಖ್ಯಮಂತ್ರಿಯಾಗಬಾರದು?: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ್ದಾರೆ.…

3 hours ago

ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು

ರಾಯಚೂರು: ರಾಯಚೂರು ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…

3 hours ago

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಗ್ರೀನ್‌ಸಿಗ್ನಲ್:‌ ಅನ್ನದಾತರ ಆಕ್ರೋಶ

ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್‌ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.…

4 hours ago