ರಾಜ್ಯ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವ: ರಾಜ್ಯಪಾಲರಿಂದ ಸಾಲೂರು ಮಠದ ಸ್ವಾಮೀಜಿಗೆ ಪಿಎಚ್‌ಡಿ ಪ್ರದಾನ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಬೆಂಗಳೂರು: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ವಿದ್ಯಾವಾರಾದಿರವರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ರವರು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು.

ಇಂದು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದ ಸಮಾರಂಭದಲ್ಲಿ ಪಿಎಚ್‌ಡಿ ವಿತರಿಸಿದ್ದಾರೆ.

ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧಿಪತಿಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.

ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ಉಪಕುಲಪತಿ ಅಹಲ್ಯ, ಕುಲಸಚಿವರಾದ ಪ್ರೊ. ಗಿರೀಶ್ ಚಂದ್ರ ಉಪಸ್ಥಿತರಿದ್ದರು.

ಸಾಲೂರು ಶ್ರೀಗಳ ಸಾಧನೆ: ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ ‘ಸಂಸ್ಕೃತ ಗ್ರಂಥ ಪುರಸ್ಕಾರವು ಲಭಿಸಿದೆ.

ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಭಾರತ ಸರ್ಕಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ 8 ಆಗಸ್ಟ್ 2020ರಂದು ಶ್ರೀ ಸಾಲೂರು ಬೃಹನ್ಮಠಕ್ಕೆ ಪಟ್ಟಾಭಿಷೇಕವಾಯಿತು.

ಇಂದು ಶ್ರೀ ಕ್ಷೇತ್ರದ ಶ್ರೀ ಸಾಲೂರು ಬೃಹನ್ಮಠದಲ್ಲಿ ಪೂಜ್ಯ ಲಿಂ. ಪಟ್ಟದ ಗುರುಸ್ವಾಮಿಗಳವರು ಮತ್ತು ಭಕ್ತರ ಆಶಯದಂತೆ ಶ್ರೀಮಠದ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರೌಢ ಪ್ರಬಂಧದಲ್ಲಿ ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ.

ಸಾಲೂರು ಶ್ರೀಗಳನ್ನು ಪಿಎಚ್.ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ.

ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ.ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದನ್ನು ಸಾಲೂರು ಶ್ರೀಗಳು ಸ್ಮರಿಸಿಕೊಂಡಿದ್ದಾರೆ.

 

 

 

 

 

 

ಆಂದೋಲನ ಡೆಸ್ಕ್

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

5 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

5 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

5 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

5 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

5 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

5 hours ago