ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಹೋಗಿದ್ದವರಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರಗೆ ಕೊರೋನಾ ಪಾಸಿಟಿವ್ ಖಚಿತವಾಗಿದೆ. ಜಯಚಂದ್ರ, ಸದ್ಯ ಬೆಂಗಳೂರಿನ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಮೇಕೆದಾಟು ಪಾದಯಾತ್ರೆ ಬಂದೋಬಸ್ತ್​ಗೆ ಹೋದ ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕೋಲಾರ ಜಿಲ್ಲೆಯ 32 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದೆ. ಕೆಜಿಎಫ್ ಜಿಲ್ಲೆಯಿಂದ ತೆರಳಿದ್ದ 111 ಜನ ಪೊಲೀಸರ ಪೈಕಿ 25 ಜನ ಸಿಬ್ಬಂದಿಗೆ ಕೊವಿಡ್19 ದೃಢವಾಗಿದೆ. ಇದರಿಂದ ಪೊಲೀಸರ ಕುಟುಂಬಸ್ಥರಿಗೆ ಆತಂಕ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿ, ನಂತರ ಪೊಲೀಸ್ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಲು ಸೂಚನೆ ಕೊಡಲಾಗಿದೆ. ಕೋಲಾರ ಡಿಹೆಚ್ಓ ಡಾ. ಜಗದೀಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 15 ಜನರಿಗೆ ಕೊರೊನಾ ಕಂಡುಬಂದಿದೆ. ಶನಿವಾರ ಬೆಳಗ್ಗೆ ಕೆಐಎಬಿಗೆ ಆಗಮಿಸಿದ್ದ 15 ಜನರಿಗೆ ಕೊರೊನಾ  ದೃಢಪಟ್ಟಿದ್ದು ನಿಗದಿತ ಕೋವಿಡ್ ಸೆಂಟರ್​ಗಳಲ್ಲಿ‌ ಐಸೊಲೇಷನ್ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 10 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿದೆ. ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ, ಹಂಪಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ವಿಜಯನಗರ ಎಸ್‌ಪಿ ಡಾ.ಕೆ. ಅರುಣ್ ಮಾಹಿತಿ ನೀಡಿದ್ದಾರೆ.

ಪಾದಯಾತ್ರೆಗೆ ನಿಯೋಜನೆಯಾಗಿದ್ದ 10 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಕಾಂಗ್ರೆಸ್​ ಪಾದಯಾತ್ರೆ ಭದ್ರತೆಗೆ ನಿಯೋಜನೆಯಾಗಿದ್ದ ರಾಮನಗರ ಜಿಲ್ಲೆಯ 10 ಪೊಲೀಸರಿಗೆ ಕೊರೊನಾ ಪಾಸಿಟಿವ್​ ದೃಢವಾಗಿದೆ. ಇನ್ನೂ ಕೆಲವರ ಕೋವಿಡ್​ ಟೆಸ್ಟ್​ ರಿಪೋರ್ಟ್​ ನಾಳೆ ಬರಲಿದೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್​ ಮಾಹಿತಿ ನೀಡಿದ್ದಾರೆ.

× Chat with us