ರಾಜ್ಯದ ಎಲ್ಲಾ ಶಾಖೆಗಳಲ್ಲೂ ಕನ್ನಡ ಸೇವೆ ವಿಸ್ತರಣೆ : ಕೆಎಫ್‍ಸಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಬಗ್ಗೆ ಅತ್ಯುನ್ನತ ಗೌರವ ಹೊಂದಿರುವುದಾಗಿ ತಿಳಿಸಿರುವ ಕೆಎಫ್ಸಿ, ರಾಜ್ಯದ ಗ್ರಾಹಕರಿಗೆ ಇಂಗ್ಲಿಷ್ ಜೊತೆ ಕನ್ನಡ ಸೇವೆಯನ್ನು ವಿಸ್ತರಿಸುವುದಾಗಿ ಸ್ಪಷ್ಟಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಡಿನ ವಿಚಾರವಾಗಿ ಟ್ವೀಟ್ ಮೂಲಕ ಕನ್ನಡಿಗರು ಕೆಎಫ್ಸಿ ಮೇಲೆ ಹರಿಹಾಯ್ದಿದ್ದರು. ಈ ಹಿನ್ನಲೆಯಲ್ಲಿ ಕೆಎಫ್ ಸಿ ಕಂಪನಿ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಕೆಎಫ್ಸಿ ಎಲ್ಲಾ ಸಂಸ್ಕೃತಿ ಮತ್ತು ಭಾಷೆಗಳ ಕುರಿತು ಅತ್ಯುನ್ನತ ಗೌರವ ಹೊಂದಿದೆ ಎಂದು ಪುನರುಚ್ಚರಿಸಲು ಬಯಸುತ್ತದೆ. ನಾವು ನೆಲದ ಕಾನೂನನ್ನು ಗೌರವಿಸಿ, ದೇಶದ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಸ್ಥಳೀಯ ಕಾನೂನು ಮತ್ತು ನಿಯಮಗಳನ್ನು ಪಾಲಿಸಿ ಕಾರ್ಯನಿರ್ವಹಿಸುತ್ತೇವೆ. ಭಾರತದಲ್ಲಿ ನಮ್ಮ ಪಯಣ ಆರಂಭಗೊಂಡಿದ್ದು, ಬೆಂಗಳೂರಿನ ನಮ್ಮ ಮೊದಲ ಕೆಎಫ್ಸಿ ರೆಸ್ಟೋರೆಂಟ್ನೊಂದಿಗೆ. ನಮ್ಮ ಬ್ರ್ಯಾಂಡ್ ಬೆಂಗಳೂರಿನೊಂದಿಗೆ 25 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ.

ನಾವು ರಾಜ್ಯದಲ್ಲಿ 75 ರೆಸ್ಟೋರೆಂಟ್ಗಳು ಮತ್ತು 1300 ಸದಸ್ಯರೊಂದಿಗೆ ಅವಿಸ್ಮರಣೀಯ ಸಂಬಂಧ ಹೊಂದಿದ್ದೇವೆ. ಕರ್ನಾಟಕ ಬ್ರ್ಯಾಂಡ್ನ ಅತಿ ಮುಖ್ಯ ಮಾರುಕಟ್ಟೆಯಾಗಿ ಮುಂದುವರಿದಿದ್ದು, ಮುಂದಿನ ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ನಮ್ಮ ಹೆಜ್ಜೆಯನ್ನು ವಿಸ್ತರಿಸಲು ಯೋಜನೆ ಹಮ್ಮಿಕೊಂಡಿದ್ದೇವೆ. ತಡೆರಹಿತ ಗ್ರಾಹಕರ ಅನುಭವ ಒದಗಿಸುವ ಗುರಿಯೊಂದಿಗೆ ನಾವು ರಾಜ್ಯದ ಗ್ರಾಹಕರಿಗೆ ಆಂಗ್ಲ ಹಾಗೂ ಕನ್ನಡ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ, ಅದು ನಮ್ಮ ರೆಸ್ಟೋರೆಂಟ್, ಅಥವಾ ಸಾಮಾಜಿಕ, ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳ ಜಾಹೀರಾತುಗಳಿರಬಹುದು.

ಹೆಚ್ಚುವರಿಯಾಗಿ ಕೆಎಫ್ಸಿ ಇಂಡಿಯಾದ ಸಹಯೋಗ ಮತ್ತು ಕ್ಷಮತಾ ಕಾರ್ಯಕ್ರಮಗಳ ಮೂಲಕ ನಾವು ಕಾರ್ಯನಿರ್ವಹಿಸುವ ಸಮುದಾಯಕ್ಕೆ ಮರಳಿ ನೆರವು ನೀಡುವ ಗುರಿ ಹೊಂದಿದ್ದೇವೆ: ಅದು ಸ್ಥಳೀಯ ರೆಸ್ಟೋರೆಂಟ್ಗಳನ್ನು ಬೆಂಬಲಿಸುವುದು, ಮಹಿಳೆಯರ ಸಬಲೀಕರಣ ಅಥವಾ ವಿಶೇಷ ಚೇತನರಿಗೆ ಉದ್ಯೋಗ ನೀಡುವುದನ್ನು ಕೂಡ ಒಳಗೊಂಡಿದೆ ಎಂದು ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದೆ.

× Chat with us