ಮಂಗಳವಾರ ಫ್ಲೈಓವರ್​ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್

ಬೆಂಗಳೂರು: ನಗರದಲ್ಲಿ ಮಂಗಳವಾರ (ಡಿ. 28) ಫ್ಲೈಓವರ್‌ಗಳನ್ನು ಕ್ಲೋಸ್ ಮಾಡುವುದಿಲ್ಲ. ನಾಳೆಯಿಂದ ಫ್ಲೈಓವರ್‌ಗಳನ್ನು ಕ್ಲೋಸ್ ಮಾಡುತ್ತೇವೆ. ರಾತ್ರಿ 10ರ ಬಳಿಕ ವಾಣಿಜ್ಯ ಚಟುವಟಿಕೆ ಬಂದ್ ಮಾಡಬೇಕು. ಬೆಂಗಳೂರಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಪರಿಶೀಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ನೈಟ್ ಕರ್ಫ್ಯೂ ಕುರಿತಾಗಿ ವಿವರಣೆ ನೀಡಿದ್ದಾರೆ.

ರಾತ್ರಿ 10ರ ಬಳಿಕ ಹೋಟೆಲ್‌, ಪಬ್‌, ರೆಸ್ಟೋರೆಂಟ್ ಕ್ಲೋಸ್ ಆಗಲಿದೆ. ಡಿಸೆಂಬರ್ 31ರಂದೂ ನೈಟ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿಸೆಂಬರ್ 31ರ ರಾತ್ರಿ ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ ಇರಲ್ಲ. ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಕೋರಮಂಗಲ ಹಾಗೂ ಇಂದಿರಾನಗರದ ಕಡೆ ಯಾರೂ ಅನಗತ್ಯವಾಗಿ ಬರುವಂತಿಲ್ಲ. ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಿದವರಿಗೆ ಮಾತ್ರ ಅವಕಾಶ ಇರಲಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಾಗು ಅವಶ್ಯಕತೆ ಇದ್ದವರು ತಿರುಗಾಡಬಹುದು. ನಾಕ ಬಂಧಿಯನ್ನು ಹಾಕಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

× Chat with us