\
ಪೊಲೀಸ್ ಅಧಿಕಾರಿಯಾಗಬೇಕೆಂಬ ರಾಜ್ಯದ ಹಲವಾರು ವಿದ್ಯಾವಂತರ ಕನಸನ್ನು ಭಗ್ನಗೊಳಿಸಿದ್ದ ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಮನೆಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಉಮೇಶ್ ಜಾಧವ್ ಭೇಟಿ ನೀಡಿ ಊಟೋಪಚಾರ ಮಾಡಿದ್ದಾರೆ.
ಈ ಕುರಿತು ಸದ್ಯ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಯುವ ಜನತೆಯ ಭವಿಷ್ಯ ಹಾಳು ಮಾಡಿದವರ ಬಳಿ ಬೆಂಬಲ ಕೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಕುರಿತು ಕಾಂಗ್ರೆಸ್ ಸಹ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಬಿಜೆಪಿಯವರೇ ಆತನ ಬ್ಯಾಕ್‌ಬೋನ್ ಎಂದು ಬರೆದುಕೊಂಡು ಚಾಟಿ ಬೀಸಿದೆ.
ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ: “PSI ಹಗರಣ ಹಾಗೂ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಭರ್ಜರಿ ಭೋಜನ! ನೀವೇ ಆರ್.ಡಿ ಪಾಟೀಲ್‌ನ ರಕ್ಷಕರು, ನೀವೇ ಆತನ ಬ್ಯಾಕ್ ಬೋನ್ ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಬಿಜೆಪಿಯವರೇ, ಕರ್ನಾಟಕ ಕಂಡ ಪ್ರಮುಖ ಹಗರಣದ ರೂವಾರಿಯೊಂದಿಗೆ ಬಿಜೆಪಿಯವರ ಅಕ್ರಮ ಸಂಬಂಧವು ಸಕ್ರಮ ಸಂಬಂಧವಾಗಿ ಬದಲಾಗಿದೆ! ಬಿವೈ ವಿಜಯೇಂದ್ರ ಅವರೇ ಪರೀಕ್ಷಾ ಅಕ್ರಮವಾದಾಗ ಆರ್.ಡಿ ಪಾಟೀಲ್ ತಲೆ ಮರೆಸಿಕೊಳ್ಳಲು ಸಹಕರಿಸಿದ್ದು ಯಾರು? ಕೇಶವಕೃಪವೊ? ಜಗನ್ನಾಥ ಭವನವೋ? ಅಕ್ರಮ ದಂಧೆಕೋರನೊಬ್ಬನೊಂದಿಗೆ ಕುಚಿಕು ಕುಚಿಕು ಸಂಬಂಧ ಹೊಂದಿರುವ ಬಿಜೆಪಿ ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪಿಸಿದ್ದಕ್ಕೆ ಇಂದು ಉತ್ತರ ಸಿಕ್ಕಿದೆಯಲ್ಲವೇ?” ಎಂದು ಬರೆದುಕೊಂಡಿದೆ.
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…
ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ…
ಬಾಗಲಕೋಟೆ: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿ, ಫೇಕ್ ಎನ್‌ಕೌಂಟರ್ ಮಾಡುವ ಉದ್ದೇಶವಿತ್ತು ಎಂದೆನ್ನಿಸುತ್ತದೆ ಎಂದು ಕೇಂದ್ರ…
ಬೆಂಗಳೂರು: ಸಾರ್ವಜನಿಕರಿಗೆ ಪಿಎಫ್ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ…
ಮಂಡ್ಯ: 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 66ವರ್ಷದ ಬಳಿಕ ಗಣಿನಾಡಿಗೆ ನುಡಿತೇರು…