ರಾಜ್ಯ

ಹನಿಟ್ರ್ಯಾಪ್‌ ರಹಸ್ಯ: ಗೃಹ ಸಚಿವರಿಗೆ 3 ಪುಟಗಳಲ್ಲಿ ದೂರು ನೀಡುವೆ: ಸಚಿವ ರಾಜಣ್ಣ

ತುಮಕೂರು: ರಾಜ್ಯದಲ್ಲಿ ಹನಿಟ್ರ್ಯಾಪ್‌ ವಿಚಾರ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಹನಿಟ್ರ್ಯಾಪ್‌ ರಹಸ್ಯವನ್ನು ಬಿಚ್ಚಿಟ್ಟು ಗೃಹ ಸಚಿವರಿಗೆ ಮೂರು ಪುಟಗಳಲ್ಲಿ ದೂರು ನೀಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಇಂದು(ಮಾರ್ಚ್.‌25) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹನಿಟ್ರ್ಯಾಪ್‌ ಯತ್ನದ ಬಗ್ಗೆ ನಾನು ಗೃಹ ಸಚಿವರಿಗೆ ದೂರು ನೀಡುತ್ತೇನೆ. ನನ್ನನ್ನು ಟಾರ್ಗೆಟ್‌ ಮಾಡಿ ಎರಡೂ ಬಾರಿ ಹನಿಟ್ರ್ಯಾಪ್‌ ಮಾಡಲು ಪ್ರಯತ್ನ ನಡೆದಿತ್ತು ಎಂದರು.

ಯುವಕನೋರ್ವನಿಂದ ಈ ಘಟನೆ ನಡೆದಿದ್ದು, ಪ್ರತಿ ಬಾರಿಯೂ ಬೇರೆ, ಬೇರೆ ಯುವತಿಯರನ್ನು ಕರೆ ತರುತ್ತಿದ್ದ. ಆದರೆ ಹನಿಟ್ರ್ಯಾಪ್‌ ಮಾಡಲು ಎರಡೂ ಬಾರಿ ಯತ್ನಿಸಿದಾಗಲೂ ಆ ಯುವತಿಯರನ್ನು ಹೈಕೋರ್ಟ್‌ನ ವಕೀಲೆಯರೆಂದು ಪರಿಚಯಿಸಿದ್ದ ಎಂದು ಹೇಳಿದರು.

ಇನ್ನು ಆ ಯುವತಿಯರು ಮನೆಗೆ ಬಂದು ಹೋದ ಸಿಸಿಟಿವಿ ದೃಶ್ಯ ಇಲ್ಲ, ಅವರು ಬಂದ ಹೋದ ವಿಡಿಯೋ ಇಲ್ಲ. ಅಲ್ಲದೇ ಹನಿಟ್ರ್ಯಾಪ್‌ ಮಾಡುವ ದಾಖಲೆ ನನ್ನ ಬಳಿ ಇಲ್ಲ. ಆದರೆ ಹುಡಗಿರನ್ನು ಕರೆ ತರುತ್ತಿದ್ದ ಯುವಕ ಎರಡೂ ಬಾರಿಯೂ ಕೂಡ ವಕೀಲೆ ಎಂದಿದ್ದ ಎಂದು ತಿಳಿಸಿದರು.

ಅರ್ಚನ ಎಸ್‌ ಎಸ್

Recent Posts

ಶೇ.20ರಷ್ಟಾದರೂ ಕಮರ್ಷಿಯಲ್ ಸಿಲಿಂಡರ್ ಒದಗಿಸಲು ಕ್ರಮವಹಿಸಿ: ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ

ಮೈಸೂರು: ಕೆಲವು ಕಡೆ ಊಟದ ವಿಚಾರಕ್ಕಾಗಿಯೇ ಪ್ರವಾಸಿಗರು ಹೋಟೆಲ್‌ ರೂಂ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ ಎಂದು ಹೋಟೆಲ್‌ ಮಾಲೀಕರ ಸಂಘದ…

12 mins ago

ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟ ಸೇರಲ್ಲ: ಟಿವಿಕೆ ಸ್ಪಷ್ಟನೆ

ಚೆನ್ನೈ: ಟಿವಿಕೆ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಟಿವಿಕೆ ಈಗ ಸ್ಪಷ್ಟನೆ…

25 mins ago

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಜೈರಾಜ್‌ ನಿಧನ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಜೈರಾಜ್‌ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಮೂದವರಾಗಿದ್ದ…

57 mins ago

ಜಮೀನುಗಳಲ್ಲಿ ಹುಲಿ ಹಾವಳಿ: ಕೂಲಿ ಕೆಲಸಕ್ಕೆ ಕಾರ್ಮಿಕರ ಹಿಂದೇಟು

ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಚಿರತೆ ಮತ್ತು ಆನೆಗಳ ದಾಳಿಯ ಬೆನ್ನಲ್ಲೇ, ಈಗ ಹುಲಿರಾಯನ…

2 hours ago

ಚಿರತೆ ದಾಳಿ: ಕೂಲಿ ಕಾರ್ಮಿಕನಿಗೆ ಗಾಯ

ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ…

5 hours ago

ಓದುಗರ ಪತ್ರ: ಡಾಂಬರು ಕಾಣದ ಕಾಳಿಹುಂಡಿ ರಸ್ತೆ

ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ…

5 hours ago