ಬೆಂಗಳೂರು : ಖ್ಯಾತ ಪತ್ರಕರ್ತರಾದ ಪಿ. ಸಾಯಿನಾಥ್ ಅವರು ಮುರುಘಾ ಶ್ರೀ ಮಠದಿಂದ 2017 ರಲ್ಲಿ ನೀಡಲಾದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಅದರ ಜೊತೆ ಚೆಕ್ ಮೂಲಕ ನೀಡಲಾದ 5 ಲಕ್ಷ ರೂ. ಬಹುಮಾನವನ್ನು ಹಿಂದಿರುಗಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಭೀಕರ ಬೆಳವಣಿಗೆಗಳ ಮಾಧ್ಯಮ ವರದಿಗಳಿಂದ ತಿಳಿದು ನಾನು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಲೈಂಗಿಕ ದೌರ್ಜನ್ಯಕ್ಕಾಗಿ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಸಂಬಂಧವಾಗಿ ನನಗೆ ಬೇಸರವಾಗಿರುವುದಿಂದ ನಾನು ನನಗೆ 2017 ರಲ್ಲಿ ಮಠದಿಂದ ನನಗೆ ನೀಡಲಾದ ʼಬಸವಶ್ರೀʼ ಪ್ರಶಸ್ತಿಯನ್ನು ಮತ್ತು ಚೆಕ್ ಮೂಲಕ ನೀಡಲಾದ 5 ಲಕ್ಷ ರೂ. ಬಹುಮಾನವನ್ನು ಹಿಂದುರುಗಿಸುತ್ತೇನೆ ಎಂದು ಹೇಳುವ ಮೂಲಕ ಪ್ರಶಸ್ತಿಯನ್ನು ಹಿಂದುರುಗಿಸಿದ್ದಾರೆ.
ಮುಂದುವರಿದು ಇಂತಹ ಭೀಕರ ಘಟನೆಯನ್ನು ಹೊರಕ್ಕೆ ತಂದಿರುವ ಮೈಸೂರಿನ “ಒಡನಾಡಿ” ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳ ಕಾಲದ ಹೋರಾಟಕ್ಕೆ ನನ್ನ ಮೆಚ್ಚುಗೆ ಇದೆ, ನಾನು ಕರ್ನಾಟಕ ಸರ್ಕಾರವು ಹಗರಣದ ತನಿಖೆಯನ್ನು ತೀವ್ರವಾಗಿ ಮುಂದುವರಿಸಲು ಮತ್ತು ಯಾವುದೇ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಮನವಿ ಮಾಡುತ್ತೇನೆ. ಎಂದು ಹೇಳಿದ್ದಾರೆ.