ಮತ ಕೇಳುವ ವಿಚಾರಕ್ಕೆ ಮತಗಟ್ಟೆ ಬಳಿ ಜೆಡಿಎಸ್‍, ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

ರಾಮನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದು ಮತದಾನ ಶುರುವಾಗಿದೆ. ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್‌ಗಳಲ್ಲಿಂದು ವೋಟಿಂಗ್ ನಡೆಯುತ್ತಿದೆ. ಆದ್ರೆ ಬಿಡದಿ‌ ಪುರಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆ ಬಳಿ ಜೆಡಿಎಸ್‍, ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ನಡೆದಿದೆ.

ರಾಮನಗರ ಜಿಲ್ಲೆ ಬಿಡದಿಯ ವಾರ್ಡ್ ನಂಬರ್ 1ರಲ್ಲಿ ಕಾರ್ಯಕರ್ತರ ನಡುವೆ ಭಾರಿ ಗಲಾಟೆಯಾಗಿದೆ. ರಕ್ತ ಬರುವಂತೆ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಜೆಡಿಎಸ್ನ ಯಲ್ಲಪ್ಪ ಕಾಂಗ್ರೆಸ್ನ ಸಿದ್ಧರಾಜು ನಡುವೆ ಮತ ಕೇಳುವ ವಿಚಾರವಾಗಿ ಪರಸ್ಪರ ಗಲಾಟೆ ನಡೆದಿದ್ದು ಹೊಡೆದಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

× Chat with us