ರಾಮನಗರ : ಚಾಮುಂಡೇಶ್ವರಿ, ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಜಾ.ದಳ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನಲ್ಲಿ ಬಹಳ ಜನ ಮುಖ್ಯಮಂತ್ರಿ ಆಗುವ ಇಚ್ಛೆ ಹೊಂದಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ. ತಾಯಿ ಚಾಮುಂಡೇಶ್ವರಿ, ಜನರ ಆಶೀರ್ವಾದಿಂದ ರಾಜ್ಯದಲ್ಲಿ ಮತ್ತೆ ಜಾ.ದಳ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಇನ್ನು ಜಾ.ದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್ನವರಿಗೆ ಸೋನಿಯಾ ಗಾಂಧಿ ಚಿಂತೆ, ಬಿಜೆಪಿಯವರಿಗೆ ಮೋದಿ ಚಿಂತೆ ಆದರೆ ಜಾ.ದಳಕ್ಕೆ ರೈತರು ಮತ್ತು ಕನ್ನಡ ನಾಡಿನ ಬಗ್ಗೆ ಚಿಂತೆ, ಮುಂದಿನ ಉತ್ಸವಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಬರಲಿದ್ದಾರೆ. ಸಾಬರು ಹೇಳುವ ಮಾತು ಎಂದೂ ಸುಳ್ಳು ಆಗುವುದಿಲ್ಲ. ಕಾಂಗ್ರೆಸ್ ಪಕ್ಷ ವ್ಯಕ್ತಿ ಉತ್ಸವ ಮಾಡುತ್ತಿದೆ. ಆದರೆ ಕುಮಾರಸ್ವಾಮಿ ಜಲೋತ್ಸವ ಮಾಡಿದರು ಎಂದರು.