ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡುತ್ತೇನೆ.
ಪ್ರತಿ ವರ್ಷ ಕುಟುಂಬ ಸಮೇತವಾಗಿ ಬರುತ್ತಿದೆ. ಈ ಬಾರಿ ಒಬ್ಬಳೇ ಬಂದಿದ್ದೇನೆ, ಮಕ್ಕಳು ಕೂಡ ಬಂದು ಮತದಾನ ಮಾಡ್ತಾರೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ.
ಬೆಳಗಾವಿಯಲ್ಲಿ 13 ರಿಂದ 14 ಸ್ಥಾನಗಳು ಬಿಜೆಪಿ ಜಿಲ್ಲೆಯಲ್ಲಿ ಬರುತ್ತದೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಹೇಳಿದ್ದಾರೆ.
ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದ ಮತಕಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳ ಅಂಗಡಿ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವ ಬೀಗರಾದ ಜಗದೀಶ್ ಶೆಟ್ಟರ್ ಅವರ ಸ್ಪರ್ಧೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು.
ಬೀಗರ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮಂಗಳಾ ಅಂಗಡಿ ಅವರು, ಅವರ ಕ್ಷೇತ್ರದಲ್ಲೂ ಉತ್ತಮ ವಾತಾವರಣ ಇದೆ. ಅವರು ಗೆದ್ದು ಬರ್ತಾರೆ ಎಂದರು.