ರಾಜ್ಯ

ಇರಾನ್-ಇಸ್ರೇಲ್‌ ಸಂಘರ್ಷದ ಎಫೆಕ್ಟ್:‌ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ

ಬೆಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳ ಸತತ ಕುಸಿತ ಮುಂದುವರೆದಿದೆ.

ಇಂದೂ ಕೂಡ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್‍ನ ಚಿನ್ನ ಗ್ರಾಂಗೆ 595 ರೂ.ನಷ್ಟು ಕುಸಿತವಾಗಿದ್ದರೆ, ಬೆಳ್ಳಿ 1 ಕೆಜಿಗೆ 15 ಸಾವಿರ ರೂ.ಗಳಷ್ಟು ಕುಸಿತವಾಗಿದೆ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 595 ರೂ.ನಷ್ಟು ಇಳಿಕೆಯಾಗಿದ್ದು, 14,002 ರೂ.ಗೆ ತಲುಪಿದೆ. 22 ಕ್ಯಾರೆಟ್‍ನ ಚಿನ್ನ ಪ್ರತಿ ಗ್ರಾಂಗೆ 545 ರೂ.ನಷ್ಟು ಇಳಿಕೆಯಾಗಿದ್ದು, 12,835 ರೂ.ನಷ್ಟಿದೆ.

ಆಭರಣ ಚಿನ್ನವಾದ 18 ಕ್ಯಾರೆಟ್‍ನ ಚಿನ್ನ 446 ರೂ.ಗಳಷ್ಟು ಕಡಿಮೆಯಾಗಿದ್ದು, ಗ್ರಾಂಗೆ 10502 ರೂ.ಗೆ ತಲುಪಿದೆ. ಮಾ.14ರಿಂದ ಇಳಿಕೆಯಾಗುತ್ತಿರುವ ಚಿನ್ನದ ದರವು ಮಾ.17 ರಂದು 24 ಕ್ಯಾರೆಟ್‍ನ ಗ್ರಾಂ ಚಿನ್ನ 66 ರೂ. ಹಾಗೂ 22 ಕ್ಯಾರೆಟ್‍ನ ಚಿನ್ನ ಗ್ರಾಂಗೆ 60 ರೂ. ಏರಿಕೆಯಾಗಿರುವುದನ್ನು ಹೊರತುಪಡಿಸಿದರೆ ನಿರಂತರ ಇಳಿಕೆಯಾಗಿದೆ.

ಅಂದು 24 ಕ್ಯಾರೆಟ್‍ನ ಚಿನ್ನ 15,966 ರೂ.ನಷ್ಟಿತ್ತು. ಇಂದು 14,002 ರೂ.ಗೆ ಇಳಿದಿದ್ದು, 964 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್‍ನ ಚಿನ್ನ ಮಾ.14 ರಂದು 14,635 ರೂ.ನಷ್ಟಿತ್ತು. ಇಂದು 12,835 ರೂ.ನಷ್ಟಿದೆ. ಸುಮಾರು 1,800 ರೂ.ಗಳಷ್ಟು ಪ್ರತಿ ಗ್ರಾಂಗೆ ಇಳಿಕೆಯಾಗಿರುವುದು ಕಂಡುಬಂದಿದೆ.

ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿಯು ಇಂದು ಪ್ರತಿ ಕೆಜಿಗೆ 15,000 ರೂ.ನಷ್ಟು ಇಳಿಕೆಯಾಗಿದ್ದು, 2,30,000 ರೂ.ಗೆ ತಲುಪಿದೆ. ಚಿನ್ನದಂತೆ ಬೆಳ್ಳಿಯೂ ಸತತವಾಗಿ ಇಳಿಕೆಯಾಗುತ್ತಿದ್ದು, ಮಾ.14ರ ನಂತರ ಇಂದಿನವರೆಗೆ ಇಳಿಕೆಯಾಗಿರುವುದು ಕಂಡುಬಂದಿದೆ. ಆದರೆ ಮಾ.17 ರಂದು 5 ಸಾವಿರದಷ್ಟು ಏರಿಕೆಯಾಗಿತ್ತು. ಮಾ.14 ರಂದು 2,75,000 ರೂ.ಗಳಿದ್ದ ಬೆಳ್ಳಿದರವು ಇಂದು 2,30,000 ರೂ.ಗೆ ಕುಸಿದಿದ್ದು, 9 ದಿನದಲ್ಲಿ 40 ಸಾವಿರ ರೂ.ನಷ್ಟು ಕುಸಿತವಾಗಿದೆ.

ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಅದರ ಪರಿಣಾಮ ಷೇರುಪೇಟೆ ಮೇಲೆ ಉಂಟಾಗುತ್ತಿದೆ. ಜೊತೆಗೆ ಚಿನಿವಾರಪೇಟೆಯಲ್ಲೂ ಕುಸಿತ ಉಂಟಾಗಿದ್ದು, ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿದರಗಳು ಏರಿಕೆಯಾಗುವ ಸಾಧ್ಯತೆ ವಿರಳ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಏಪ್ರಿಲ್.‌9ರಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -1 ಫಲಿತಾಂಶದ ದಿನಾಂಕ ಪ್ರಕಟಣೆ ಗೊಂದಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಪರೀಕ್ಷಾ ಮಂಡಳಿಯು ಇದೇ…

18 mins ago

ರೈತರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ: ಜೆಸಿಬಿ ಕಾರ್ಯ ಸ್ಥಗಿತ

ಮೈಸೂರು: ವರುಣ ಕ್ಷೇತ್ರದ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್‌ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಂದ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗುಡುಮಾದನಹಳ್ಳಿಯಲ್ಲಿ…

1 hour ago

ಏಪ್ರಿಲ್‌ನಿಂದ ವೇತನ ಪರಿಷ್ಕರಣೆಗೆ ಒಪ್ಪಿದರೂ ತಿರಸ್ಕಾರ: ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು

ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದು, ಮತ್ತೆ ಪ್ರತಿಭಟನೆ, ಹೋರಾಟಕ್ಕೆ ಮುಂದಾಗಿದ್ದಾರೆ. 38 ತಿಂಗಳ ವೇತನ…

2 hours ago

ಮೈಸೂರು: ಲೋಕೋಪಯೋಗಿ ಇಲಾಖೆ ಎಇಇ ರೇವನ್‌ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಮೈಸೂರು: ಪಿಡಬ್ಲ್ಯೂಡಿ ಅಧಿಕಾರಿ ಜಿ.ಕೆ.ರೇವನ್‌ ಕುಮಾರ್‌ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಂದರು ಮತ್ತು ಒಳನಾಡಿನ…

2 hours ago

ರಾಜ್ಯದಲ್ಲಿ ಇಂದು ಸಹ ಗುಡುಗು ಸಹಿತ ಧಾರಾಕಾರ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.…

2 hours ago

ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್‌ ಶವವಾಗಿ ಪತ್ತೆ

ಮಂಡ್ಯ: ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ…

3 hours ago