ಚಿತ್ರದುರ್ಗ : ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಿಗಿರುವ ಸಂಬಂಧವಾಗಿ ಬಂಧಿತರಾದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ರಾತ್ರಿ ಬಂಧಿಸಲಾಯಿತು.
ರಾತ್ರಿ 10 ಗಂಟೆಯಿಂದ ಆರಂಭವಾದ ಬಂಧನದ ಪ್ರಕ್ರಿಯೆ ನಸುಕಿನ ಜಾವ ಬೆಳಿಗ್ಗೆ ಮೂರು ಗಂಟೆಗೆ ಪೂರ್ಣಗೊಂಡಿತು. ಮುರುಘಾ ಶರಣರ ಪ್ರಾಥಮಿಕ ವಿಚಾರಣೆ, ವೈದ್ಯಕೀಯ ತಪಾಸಣೆ ಹಾಗೂ ನ್ಯಾಯಾಧೀಶರ ಎದುರು ಹಾಜರುಪಡಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ ಪೊಲೀಸ್ ಅಧಿಕಾರಿಗಳು ನಗರದ ಹೊರಹೊಲೆಯದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಕಾರಾಗೃಹಕ್ಕೆ ಶ್ರೀಗಳನ್ನು ಕರೆತಂದರು.
ಡಿವೈಎಸ್ಪಿ ಮುಂದೆ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ :
ಮುರುಘಾ ಮಠಕ್ಕೆ ತೆರಳಿ ಶಿವಮೂರ್ತಿ ಶರಣರನ್ನು ವಶಕ್ಕೆ ಪಡೆದ ಪೊಲೀಸರು. ಬಳಿಕವರನ್ನು ವಿಚಾರಣೆಗಾಗಿ 30km ದೂರದಲ್ಲಿರುವ ಚಳ್ಳಕೆರೆಗೆ ಕರೆದೊಯ್ದರು. ಅಲ್ಲಿ ಡಿವೈಎಸ್ಪಿ ಅವರ ಮುಂದೆ ಒಂದು ಗಂಟೆಗೂ ಅಧಿಕ ವಿಚಾರಣೆ ನಡೆಸಲಾಯಿತು. ಬಳಿಕ ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದು ಜಿಲ್ಲಾ ಶಸ್ತ್ರಚಿಕಿತ್ಸಕ dd ಡಾಕ್ಟರ್ ಬಸವರಾಜು ಅವರ ನೇತೃತ್ವದಲ್ಲಿ ಸುಮಾರು 2 ಗಂಟೆಗಳಿಗೂ ಅಧಿಕಕಾಲ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸೇರಿದಂತೆ ಪರೀಕ್ಷೆಗಳನ್ನು ಶ್ರೀಗಳಿಗೆ ನಡೆಸಲಾಯಿತು. ಈ ಪ್ರಕ್ರಿಯೆ ನಡೆಯುವವರೆಗೂ ಸಾಕಷ್ಟು ಜನ ಮುರುಘಾ ಶ್ರೀಗಳ ಅನುಯಾಯಿಗಳು ಹಾಗೂ ಭಕ್ತರು ಆಸ್ಪತ್ರೆ ಒಳಗಡೆ ಆಗಮಿಸದಂತೆ ನಿರ್ಬಂಧ ವಿಧಿಸಲಾಗಿತ್ತು.
ಬಳಿಕ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೋಮಲ ಅವರ ಎದುರು ಗಳನ್ನು ಹಾಜರುಪಡಿಸಲಾಯಿತು. ಶರಣರಪ್ಪ ಪರ ವಕೀಲರು ಜಾಮೀನು ಕೋರಿ ಸ್ಥಳದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚನೆ ನೀಡಿ ಶ್ರೀಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಬಳಿಕ ಜಿಲ್ಲಾ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಶ್ರೀಗಳನ್ನು ಕರೆದು ತಪಾಸಣೆ ನಡೆಸ ಬಳಿಕ ಜೈಲು ಸಿಬ್ಬಂದಿ ಕಾರಾಗೃಹಕ್ಕೆ ಕರೆದೊಯ್ದರು.