ರಾಜ್ಯ

ಇನ್ವೆಸ್ಟ್‌ ಕರ್ನಾಟಕ 2025; ಮಂಗಳವಾರ (ಫೆ. 11) ಭವ್ಯ ಉದ್ಘಾಟನೆ; ಹೂಡಿಕೆ ಉತ್ಸವಕ್ಕೆ ಮುನ್ನುಡಿ”

ಇನ್ವೆಸ್ಟ್‌ ಕರ್ನಾಟಕ 2025; ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ

ಈ ಬಾರಿಯ ಜಿಮ್ ನಲ್ಲಿ ಏನಿರುತ್ತೆ? ಯಾವ ಚರ್ಚೆ ಯಲ್ಲಿ ಯಾರು ಭಾಗವಹಿಸುತ್ತಾರೆ

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದ್ದು, ಮಂಗಳವಾರ (ಫೆ. 11) ಮಧ್ಯಾಹ್ನ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭವು ನಾಲ್ಕು ದಿನಗಳ ಹೂಡಿಕೆ ಉತ್ಸವಕ್ಕೆ ಮುನ್ನುಡಿ ಬರೆಯಲಿದೆ.

ಈ ಹೂಡಿಕೆದಾರರ ಸಮಾವೇಶವು, ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದ್ದಾರೆ.

ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ.
ಸಮಾವೇಶದ ವಿವಿಧ ಕಾರ್ಯಕ್ರಮಗಳ ವಿವರ ಹೀಗಿದೆ:

ಮೊದಲ ದಿನ. ಫೆಬ್ರುವರಿ 12:

* ಬೆಳಿಗ್ಗೆ 10:35 – 11:05 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ (AI, Cybersecurity, and Government: Building Digital Resilience in an Uncertain World)
ಭಾಷಣಕಾರರು: ಸೈಮನ್ ಲಾಂಗ್ (ದಿ ಎಕನಾಮಿಸ್ಟ್-ನ ಸಂಪಾದಕ)
ಕಾರ್ಯಕ್ರಮ ನಿರೂಪಣೆ: ಆನ್ ಡಂಕಿನ್ (ಅಮೆರಿಕದ ಇಂಧನ ಇಲಾಖೆಯ ಮಾಜಿ ಸಿಐಒ)

* ಮಧ್ಯಾಹ್ನ 12:00 ರಿಂದ 1:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಸಾಧಿಸುವುದು (Resilient Pathways: Charting India’s Economic Growth Amid Global Challenges)
ಮುಖ್ಯ ಭಾಷಣ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ (ಭಾರತದ ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ)
ಕಾರ್ಯಕ್ರಮ ನಿರ್ವಹಣೆ: ಸಲ್ಮಾನ್ ಸೋಜ್ (ಅರ್ಥಶಾಸ್ತ್ರಜ್ಞ ಮತ್ತು ಲೇಖಕ)

* ಮಧ್ಯಾಹ್ನ 2:00 ರಿಂದ 3:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ: ಭವಿಷ್ಯಕ್ಕೆ ನಾವೀನ್ಯತೆ (Innovating the Future)
ಮುಖ್ಯ ಭಾಷಣ: ಅಕಿಸ್ ಇವಾಂಜೆಲಿಡಿಸ್ (ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ,) ಕಾರ್ಯಕ್ರಮ ನಿರೂಪಣೆ: ಶಿವ್ ಅರೂರ್ (ಭಾರತದ ಪತ್ರಕರ್ತ ಮತ್ತು ಬರಹಗಾರ)

* ಮಧ್ಯಾಹ್ನ 4:30 ರಿಂದ 5:30 | ಸಭಾಂಗಣ ಎ |
ತಜ್ಞರ ಸಮೂಹ ಚರ್ಚೆ – ಮುಂದಾಳತ್ವ: ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು (Leading the Charge: Young Innovators Shaping India’s Future)

ಭಾಷಣಕಾರರು: ಪಾರ್ಥ್ ಜಿಂದಾಲ್ ( ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ), ಜಯ್‌ ಕೋಟಕ್ (ಕೋಟಕ್‌811-ನ ಸಹ-ಮುಖ್ಯಸ್ಥ), ಸುಜನ್ನಾಹ ಮುತ್ತೂಟ್ (ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ)
ಕಾರ್ಯಕ್ರಮ ನಿರೂಪಣೆ: ನಿಖಿಲ್ ಕಾಮತ್ (ಜಿರೋಧಾ, ಟ್ರೂ ಬಿಯಕಾನ್, ಗೃಹಸ್-ನ ಸಹ-ಸಂಸ್ಥಾಪಕ)

ದಿನ 2 – ಫೆಬ್ರುವರಿ 13, 2025

* ಬೆಳಿಗ್ಗೆ 11:05 ರಿಂದ 11:45 | ಸಭಾಂಗಣ ಎ | ಸಂವಾದ ಕಾರ್ಯಕ್ರಮ– ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ (Pioneering the AI Frontier: From Moonshots to Real-World Impact
)

* ಭಾಷಣಕಾರರು: ಸೆಬಾಸ್ಟಿಯನ್ ಥ್ರನ್ (ಗೂಗಲ್‌ ಎಕ್ಸ್‌ನ ಸ್ಥಾಪಕ), ಪ್ರಶಾಂತ್ ಪ್ರಕಾಶ್ (ಆ್ಯಕ್ಸೆಲ್ ಪಾರ್ಟನರ್ಸ್‌ನ ಸ್ಥಾಪಕ ಪಾಲುದಾರ)
ಕಾರ್ಯಕ್ರಮ ನಿರೂಪಣೆ: ಮಿಷೆಲ್ ಹೆನ್ನೆಸ್ಸಿ (ದಿ ಎಕನಾಮಿಸ್ಟ್‌ನ ಗ್ರಾಫಿಕ್ ಡಿಟೆಲ್‌ ಸಂಪಾದಕ)

* ಮಧ್ಯಾಹ್ನ 4:30 – 5:30 | ಸಭಾಂಗಣ ಎ | ಗುಂಪು ಚರ್ಚೆ – ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ (From Diverse Paths to a Common Goal
)
ಭಾಷಣಕಾರರು: ಕಿರಣ್ ರಾವ್ (ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಬರಹಗಾರ್ತಿ), ಐರಿನಾ ಘೋಸ್ (ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ), ಸುಖಿ ಸಿಂಗ್ (ಸುಖೀಸ್ ಗೌರ್ಮೆಟ್ ಫುಡ್ಸ್ನ ಸಂಸ್ಥಾಪಕಿ)
ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)

ದಿನ 3 – ಫೆಬ್ರುವರಿ 14, 2025:

* ಬೆಳಿಗ್ಗೆ 10:30 ರಿಂದ 11:30 | ಸಭಾಂಗಣ ಎ | ಸಂವಾದ ಕಾರ್ಯಕ್ರಮ- ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ದೇಶಗಳು ಶಾಶ್ವತ ಕ್ಷಮತೆ ಹೇಗೆ ನಿರ್ಮಿಸಬಹುದು (Thriving in Turbulence: How Nations Can Build Lasting Resilience
)
ಭಾಷಣಕಾರರು: ಜಾರ್ಜ್ ಪಪಂಡ್ರಿಯೊ (ಗ್ರೀಸ್‌ನ ಮಾಜಿ ಪ್ರಧಾನಿ), ಶಶಿ ತರೂರ್ (ಲೋಕಸಭಾ ಸದಸ್ಯ) ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)‌

ಕರ್ನಾಟಕದ ಭವಿಷ್ಯಕ್ಕೆ ದೂರದೃಷ್ಟಿಯ ಮಾರ್ಗಸೂಚಿ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗ ಬೆಳೆಸುವ ರಾಜ್ಯದ ಬದ್ಧತೆಗೆ ನಿದರ್ಶನವಾಗಿದೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಬಲಪಡಿಸುವಂತಹ ಪ್ರಮುಖ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ಸಚಿವ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕರ್ನಾಟಕವು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಇವರು ಕ್ವಿನ್‌ ಸಿಟಿ ಉಪಕ್ರಮವನ್ನು ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ.

ಸಮಾವೇಶದ ಕಾರ್ಯಕ್ರಮಗಳ ವಿವರಗಳಿಗೆ https://investkarnataka.co.in/gim2025/events-schedule/ ಭೇಟಿ ನೀಡಿ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಬೆಂಗಳೂರಿನಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ: 10 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಸಿಸಿಬಿ ನಾರ್ಕೋಟಿಕ್ಸ್‌ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ…

27 mins ago

ಯುದ್ಧಕ್ಕೆ ನಾವು ಸದಾ ಸಿದ್ಧ: ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶತ್ರು ರಾಷ್ಟ್ರಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅಮೇರಿಕಾದ ಬಳಿ ಮುಗಿಯದ ಶಸ್ತ್ರಾಸ್ತ್ರಗಳ ಬೃಹತ್‌…

57 mins ago

ಕಾವೇರಿ ನದಿ ದಡದಲ್ಲಿ ತ್ಯಾಜ್ಯದ ರಾಶಿ..!

ತವರಿನಲ್ಲೇ ಕಣ್ಣೀರಿಡುತ್ತಿರುವ ಜೀವನದಿ; ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ ಕೃಷ್ಣ ಸಿದ್ದಾಪುರ ಸಿದ್ದಾಪುರ: ಕೋಟ್ಯಾಂತರ ಜನರ ಜೀವನಾಡಿಯಾಗಿರುವ…

1 hour ago

ಇಂದು ರಕ್ತ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ

ಬೆಂಗಳೂರು: ಇಂದು ನಭೋ ಮಂಡಲ ಚಂದ್ರಗ್ರಹಣದ ಕೌತುಕಕ್ಕೆ ಸಾಕ್ಷಿಯಾಗಲಿದೆ. ಈ ರಕ್ತ ಚಂದ್ರಗ್ರಹಣ ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ…

2 hours ago

ಸಾಲೂರು ಶ್ರೀ ರಚಿಸಿದ್ದ ಮಹಾಪ್ರಬಂಧಕ್ಕೆ ಸಂಸ್ಕೃತ ಗ್ರಂಥ ಪುರಸ್ಕಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ…

3 hours ago

ಹನೂರು: ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ: ಜಿಲ್ಲಾಧಿಕಾರಿ ಶ್ರೀರೂಪ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ…

3 hours ago