ಬೆಂಗಳೂರು: ಹಿಟ್ ಅಂಡ್ ರನ್ ಕೇಸ್‌ನಲ್ಲಿ ಹತ್ತು ವರ್ಷ ಜೈಲು ಹಾಗೂ ಏಳು ಲಕ್ಷ ರೂ. ದಂಡ ವಿಧಿಸುವ ಕೇಂದ್ರ ಸರ್ಕಾರದ ಕನೂನನ್ನು ವಿರೋಧಿಸಿ ಜನವರಿ ೧೭ ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘ ತಿಳಿಸಿದೆ.
ಬೆಂಗಳೂರಿನಲ್ಲಿಂದು ಲಾರಿ ಸಂಘದ ಅಧ್ಯಕ್ಷ ನವೀನ್ ರೆಡ್ಡಿ ಮಾತನಾಡಿ, ಎಲ್ಲೇ, ಯಾವುದೇ ಅಪಘಾತವಾದರೂ ಮೊದಲು ಲಾರಿ ಚಾಲಕರ ಮೇಲೆಯೇ ದಾಳಿಗಳಾಗುತ್ತವೆ. ಲಾರಿಯ ಹಿಂಬದಿ ಚಕ್ರಕ್ಕೆ ಬೈಕ್ ಸಿಲುಕಿದಾಗ ಲಾರಿಯನ್ನು ತಕ್ಷಣ ನಿಲ್ಲಿಸುವುದು ಸುಲಭದ ಕೆಲಸವಲ್ಲ. ಅಂತಹ ಸ್ಥಳದಲ್ಲಿ ಲಾರಿ ನಿಲ್ಲಿಸಿದರೇ ಚಾಲಕನ ಮೇಲೆ ವಿನಾಕಾರಣ ಹಲ್ಲೆಗಳು ನಡೆಯುತ್ತವೆ. ಅಂತಹ ಸಮಯದಲ್ಲಿ ಆತ್ಮ ರಕ್ಷಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗುತ್ತಾರೆ. ಇಂತಹ ಘಟನೆಗಳನ್ನು ಹಿಟ್ ಅಂಡ್ ರನ್ ಎನ್ನುವುದು ಎಷ್ಟು ಸರಿ?. ಕೇಂದ್ರ ಸರ್ಕಾರ ಕೂಡಲೇ ಈ ಕಾನೂನನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಹೊಸ ನಿಯಮದಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗುತ್ತದೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕೂಡ ಹೇಳಿದ್ದು, ಕೇಂದ್ರ ಈ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಜೊತೆಗೆ ಕರ್ನಾಟಕ ಹೊರತುಪಡಿಸಿ ಮಹಾರಾಷ್ಟ್ರ ಮಾತ್ರವಲ್ಲದೆ ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ, ರಾಜಸ್ಥಾನಗಳಲ್ಲಿಯೂ ಲಾರಿ ಮುಷ್ಕರ ನಡೆಯಲಿದೆ ಎಂದು ಹೇಳಿದರು.
• ಚಿತ್ರ ಮತ್ತು ಬರಹ : ಸಿರಿ ಮೈಸೂರು ಮೈಸೂರಿನಿಂದ ಹೊರಗಿರುವ ಮೈಸೂರಿಗರು ಈಗಲೂ ಮೈಸೂರಿನಲ್ಲಿರುವ ಮೈಸೂರಿಗರಿಗೆ ಈ ಪಶ್ನೆ…
• ಶೇಷಾದ್ರಿ ಗಂಜೂರು ಅಮೆರಿಕದ ಫ್ಲಾರಿಡಾ ರಾಜ್ಯದ ಸಣ್ಣ ಊರೊಂದರ ಹೈಸ್ಕೂಲಿನಲ್ಲಿ, 21 ವರ್ಷಗಳ ಹಿಂದೆ, ಇಬ್ಬರು ಬಾಲಕಿಯರು ಹೊಡೆದಾಡಲು…
ಬೆಂಗಳೂರು : ಕರ್ನಾಟಕ ರಸ್ತೆ ಸಾರಿಗೆ ನಿಗಮವು ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ವಿವಿಧ ಪ್ರವಾಸಿ, ಯಾತ್ರಾ ಸ್ಥಳಗಳಿಗೆ ಪ್ಯಾಕೇಜ್ ಟೂರ್…
ಕೊಲಂಬೋ : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಭಾನುವಾರ (ಫೆ.15) ಸಂಜೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗತ್ತಿನಾದ್ಯಂತ ಕ್ರಿಕೆಟ್…
ಕೋಲ್ಕತ್ತ : ಟಿ-20 ವಿಶ್ವಕಪ್‌ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ…