ರಾಜ್ಯ

ಪುರುಷರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ; ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

ಮಂಡ್ಯ : ಆಧುನಿಕ ಜಗತ್ತಿನಲ್ಲಿ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಗೆ ಹತ್ತಿಕ್ಕಲು ರಾಜ್ಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬರುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಸಮಾನ ಮನಸ್ಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು-ವಿವಿಧ ಇಲಾಖೆಗಳ ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಆಧುನಿಕ ಮಹಿಳೆಯರಿಂದ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ನಿಯಂತ್ರಣ ಮತ್ತು ಹೋರಾಟ ರೂಪಿಸುವ ಸಮಿತಿ ರಚನೆಯ ಪೂರ್ವಭಾವಿ ಸಭೆ ನಡೆದು ಹಲವು ನಿರ್ಣಯಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಯಾರೂ ಪರಿಗಣಿಸುತ್ತಿಲ್ಲ, ಈ ಕುರಿತು ಆಲೋಚನೆ ಮಾಡಿ ಸಫಲತೆ ಪಡೆಯಬೇಕಿದೆ, ಸಂಘಟನೆ ರಚನೆಗೊಳ್ಳಬೇಕಿದೆ ಎನ್ನುವ ಸುದೀರ್ಘ ಚರ್ಚೆ ನಡೆದಿದೆ. ಸಾಕಷ್ಟು ಮಂದಿ ಉತ್ತಮ ಸಲಹೆ ಅಭಿಪ್ರಾಯ-ಮಾರ್ಗಸೂಚನೆಗಳನ್ನು ನೀಡಿದ್ದಾರೆಂದು ತಿಳಿಸಿದರು.

ಸ್ವಾತಂತ್ರ ಬಂದ ನಂತರದಲ್ಲಿ ಹೆಣ್ಣುಮಕ್ಕಳಿಗೆ ಎಲ್ಲಾ ಕಾನೂನು ರಕ್ಷಣೆಗಳು ಹೆಚ್ಚಾಗಿವೆ, ಹಿಂದೆ ಪುರುಷರ ದೌರ್ಜನ್ಯ ಇತ್ತು, ಆ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾನೂನಾತ್ಮಕವಾಗಿ ಬಂದವು. ಇದೀಗ ಕೆಲವು ಮಹಿಳೆಯರಿಂದ ತನ್ನ ಕೌಟುಂಬಿಕ ಜೀವನದಲ್ಲಿ ಪುರುಷರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.

ಪುರುಷರ ಮೇಲಿನ ದೌರ್ಜನ್ಯ ಜಗಜ್ಜಾಹಿರಾಗುವುದು ಸಾಮಾನ್ಯ. ಆದರೆ, ಹೆಣ್ಣು ಮಕ್ಕಳ ದೌರ್ಜನ್ಯ ಸಮಾಜಿಕವಾಗಿ ತೆರೆದುಕೊಳ್ಳುವುದು ಕಷ್ಟ, ಬಾಯಿಬಿಟ್ಟರೆ ಸಂಸಾರದ ಗುಟ್ಟು ರಟ್ಟು ಎನ್ನುವಂತಾಗಿದೆ ಪುರುಷರ ಪರಿಸ್ಥಿತಿಗಳು ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಮತ್ತು ಕೌಟುಂಬಿಕ ಸಮಸ್ಯೆಗಳ ಸಮಾಲೋಚಕಿ ರಜನಿರಾಜ್, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳ ಸಾಲಿನಲ್ಲಿ ಪುರುಷರಿಗೆ ಆಗುತ್ತಿರುವ ದೌರ್ಜನ್ಯಗಳ ಪ್ರಕರಣ ಹೆಚ್ಚಾಗುತ್ತಿವೆ. ಮಹಿಳಾ ಆಯೋಗ ಇರುವಂತೆಯೇ ಪುರುಷ ಆಯೋಗ ರಚನೆಯಾಗಬೇಕಿದೆ ಎಂದು ಸಲಹೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯ ಸುದಿನದಲ್ಲಿ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಸಭೆ ನಡೆಯುತ್ತಿರುವುದು ಅವಿಸ್ಮರಣೀಯ. ಸಂಘಟನೆ ರೂಪುಗೊಂಡು ನೊಂದಣಿ ಮಾಡಿ, ನಂತರ ಹೋರಾಟ, ಸಮಾಲೋಚನೆ, ಕಾರ್ಯರೂಪಗಳ ಬಗ್ಗೆ ಚರ್ಚಿಸಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಕುಂದುಕೊರತೆ ವಿಭಾಗ, ಮಹಿಳಾ ಠಾಣೆ ಇದೆ, ಎಲ್ಲಾ ಮಹಿಳಾ ಸಂಘಟನೆಗಳು ಮುಂಚೂಣಿಯಲ್ಲಿವೆ. ಪುರುಷರಿಗೆ ಯಾಕೆ ಇಷ್ಟು ರಕ್ಷಣಾತ್ಮಕ ಕಾನೂನು ಇಲ್ಲ. ಪುರುಷರ ಮೇಲೆ ಆಗುವ ದೌರ್ಜನ್ಯಗಳ ನಿಯಂತ್ರಣ ಮಾಡುವವರು, ದೌರ್ಜನ್ಯಕ್ಕೊಳಗಾದ ಒಬ್ಬಂಟಿ ಪುರುಷರ ರಕ್ಷಣೆ ಹೇಗೆ ನಡೆಯುತ್ತದೆ ಎನ್ನುವ ಪ್ರಶ್ನೆಗಳು ಸಮಾಜದಲ್ಲಿ ಎದ್ದಿವೆ ಎಂದು ಹೇಳಿದರು.

ಇಂತಹ ದೌರ್ಜನ್ಯ-ದಬ್ಬಾಳಿಕೆ ನಿಲ್ಲಿಸಲು ಪುರುಷರ ಹಿತರಕ್ಷಣಾ ಸಮಿತಿ ಅತ್ಯವಶ್ಯಕ. ರಾಜ್ಯ, ಜಿಲ್ಲೆಯಿಂದ ಆರಂಭಗೊಳ್ಳಲಿದೆ. ಮಂಡ್ಯ ಜಿಲ್ಲೆಯಿಂದಲೇ ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ರಚನೆಗೊಳ್ಳಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ವಿವಿಧ ಸಂಘನೆಗಳ ಮುಖಂಡರಾದ ಎನ್.ವೈ.ಕೆ ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ಪ್ರೊ.ಜಿ.ಟಿ.ವೀರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಸತೀಶ್, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ, ಎಂ.ಗುರುಪ್ರಸಾದ್, ಪತ್ರಕರ್ತ ಎಂ.ಶಿವಕುಮಾರ್, ಬೆಟ್ಟಹಳ್ಳಿ ಮಂಜುನಾಥ್, ಶಂಕುಂತಲಾ, ನಿಚಿತಾಗೌಡ, ಅರಸು ಮತ್ತಿತರರಿದ್ದರು.

ಆಂದೋಲನ ಡೆಸ್ಕ್

Recent Posts

ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ರೈತರಿಗೆ ಆತಂಕ ಸೃಷ್ಟಿಸಿ ಜಾನುವಾರುಗಳು ಹಾಗೂ ಸಾಕು…

13 hours ago

ಶಿವಶಂಕರಪ್ಪ ಸಾಹುಕಾರ್‌ಗೆ ಹೊಸ ಕಾನೂನು ಸಂಕಷ್ಟ

ಬೆಂಗಳೂರು: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಈ ಹೊಸ ಕಾನೂನು ಸಂಕಷ್ಟ ಎದುರಾಗಿದೆ.…

16 hours ago

ಗೋಪಾಲಸ್ವಾಮಿ ಬೆಟ್ಟ: ಕೊನೆಗೂ ಭಕ್ತರಿಗೆ ಸಿಕ್ಕಿತು ನೆರಳು!

ಬೆಟ್ಟದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಶಾಸಕ; ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದ ‘ಆಂದೋಲನ’ ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ…

19 hours ago

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

23 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

23 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

23 hours ago