ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಚಳಿಗಾಲ ಆರಂಭದಲ್ಲಿಯೇ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ವರ್ಷದ ಕೊನೆಯಲ್ಲಿ ಉಳಿದ ತಿಂಗಳುಗಳಿಗಿಂತ ಸಂಘರ್ಷಗಳ ಸಂಖ್ಯೆ ಏರಿಕೆ ಕಂಡಿದೆ. ಕಾಡಂಚಿನ ಗ್ರಾಮಗಳಲ್ಲಿನ ಜಾನುವಾರುಗಳು, ಮಾನವರ ಮೇಲೆ ದಾಳಿ ನಡೆಯುತ್ತಿದ್ದು, ಮಾನವ-ಪ್ರಾಣಿ ಸಂಘರ್ಷ ಮಾಹಿತಿ ಇಲ್ಲಿದೆ.
ನ.2ರಂದು ಬಂಡೀಪುರದ ಹೆಡಿಯಾಲ ಓಂಕಾರ ವಲಯದ ಮಹಾದೇವನಗರಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತು. ರೊಚ್ಚಿಗೆದ್ದ ರೈತರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ನ.6ರಂದು ಕಾಡಬೇಗೂರು ಕಾಲೋನಿಯಲ್ಲಿ ಕೃಷಿಕ ಬಾಲಾಜಿ ನಾಯಕ ಎಂಬುವರನ್ನು ಹುಲಿ ಕೊಂದುಹಾಕಿತ್ತು..
ನ.24ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಮೃತಪಟ್ಟಿದೆ.
ನ.24ರಂದು ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದನ ಮೇಯಿಸುತ್ತಿದ್ದ ರತ್ನಮ್ಮ (49) ಅವರ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು.
ನ.28ರಂದು ಬಂಡೀಪುರದ ಹೆಡಿಯಾಲ ಓಂಕಾರ ವಲಯದಲ್ಲಿ ದನಗಾಯಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದರು.
ನ.29ರಂದು ಮೈಸೂರು ತಾಲೂಕಿನಲ್ಲೂ ಹುಲಿ ಕಾಣಿಸಿಕೊಂಡಿತ್ತು. ಸೆರೆಗೆ ಸತತವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಡಿ.6ರಿಂದ ನಾಗರಹೊಳೆ ಕಾಡಂಚಿನ ಶೆಟ್ಟಿಹಳ್ಳಿ ನೇಗತ್ತೂರು ಗ್ರಾಮದ ಬಳಿ ಹುಲಿ ಕಂಡಿದ್ದು, ಕಾಡಿಗಟ್ಟುವ ಕೆಲಸ ನಡೆಯುತ್ತಿದೆ.
ಡಿ.8 ಕೊತ್ತಲವಾಡಿ ಗ್ರಾಮದ ಕಂದಾಯ ಇಲಾಖೆ ಜಮೀನಿನ ಪೊದೆಯೊಂದರಲ್ಲಿ ಎರಡು ಹುಲಿಗಳ ಕಳೇಬರ ಪತ್ತೆಯಾಗಿತ್ತು.
ಡಿ.12ರಂದು ಗುಂಡ್ಲುಪೇಟೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಆಡಿನ ಕಣಿವೆ ಗ್ರಾಮದ ಬಸವಯ್ಯ (55) ನನ್ನು ಕೊಂದು ಹಾಕಿತ್ತು.
2022ರ ನವೆಂಬರ್-ಡಿಸೆಂಬರ್ ಹುಲಿ ದಾಳಿಗಳು.
ನವೆಂಬರ್ 8, 2022: ಹಸುವೊಂದು ಮೇವು ಮೇಯುವಾಗ ದಾಳಿ ಮಾಡಿ ಬಲಿ ತೆಗೆದುಕೊಂಡ ಘಟನೆ ಹನಗೋಡು ಸಮೀಪದ ಬಿ ಆರ್ ಕಾವಲು ಅರಣ್ಯದಲ್ಲಿ ನಡೆದಿತ್ತು. ಗೌಡಿಕೆರೆ ಗ್ರಾಮದ ಶೇಖರ್ ಎಂಬುವವರಿಗೆ ಸೇರಿದ ಹಸುವನ್ನು ಕೊಂದಿರುವ ಹುಲಿ ಸುಮಾರು ಅಂದಾಜು 200 ಮೀ. ನಷ್ಟು ಎಳೆದೊಯ್ದು ಬಿಟ್ಟು ಹೋಗಿತ್ತು.
ನವೆಂಬರ್ 22, 2022: ಕೊಡಗಿನ ಸ್ವಾತಿ ಕುಟ್ಟಯ್ಯ ಒಡೆತನದ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಹಸು ಮೇಲೆ ದಾಳಿ ನಡೆಸಿತ್ತು.
ಡಿಸೆಂಬರ್ 14, 2022: ಮೈಸೂರಿನ ಬಳ್ಳೂರು ಹುಂಡಿ ಬಳಿ ದನ ಮೇಯಿಸುತ್ತಿರುವಾಗ ಸ್ವಾಮಿ ದಾಸಯ್ಯ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ಜತೆಗಿದ್ದ ದನಗಾಹಿಗಳಿಬ್ಬರು ಕಲ್ಲು ತೂರಿದ ಮೇಲೆ ಹುಲಿ ದಾಸಯ್ಯ ಅವರನ್ನು ಬಿಟ್ಟು ಹೋಗಿತ್ತು. ಆದರೆ ಪಂಜದಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿತ್ತು.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…