ಬೆಂಗಳೂರು : ರಾಜ್ಯದ ಎಲ್ಲ 224 ಮಂದಿ ಶಾಸಕರೂ ಮುಖ್ಯ ಮಂತ್ರಿಯಾಗಲು ಅರ್ಹರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಷಯದಲ್ಲಿ ನಯವಾಗಿ ಜಾರಿಕೊಂಡರು.
ವಿಧಾನಸಭೆಯಲ್ಲಿ 2026- 27ನೇ ಸಾಲಿನ ಆಯವ್ಯಯ ಅವರು ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಅವರನ್ನು ಬಿಜೆಪಿಯ ಹಿರಿಯ ಶಾಸಕ ಸುನಿಲ್‌ಕುಮಾರ್ ಮಧ್ಯಪ್ರವೇಶಿಸಿ ಡಿ.ಕೆ.ಶಿವ ಕುಮಾರ್ ಅವರು ಮುಖ್ಯ ಮಂತ್ರಿಯಾದರೂ ಖುಷಿಯಾಗುತ್ತದೆ ಎಂದು ಹೇಳಲಿಲ್ಲ ಎಂದು ಛೇಡಿಸಿದರು.
ಆಗ ಮುಖ್ಯಮಂತ್ರಿಗಳು, ನಮ್ಮ ಪಕ್ಷದ ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯ ಮಂತ್ರಿ ಎಂಬುದನ್ನು ಪುನರುಚ್ಚರಿಸಿದರು. ನಮ್ಮಲ್ಲಿ ಮುಖ್ಯಮಂತ್ರಿಯಾದರೂ ಖುಷಿ ಯಾಗುತ್ತದೆ. 224 ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರು. ಯಾರೇ ಸಿಎಂ ಆದರೂ ಖುಷಿಪಡುತ್ತೇನೆ. ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಶಾಸಕ ಕೋನ ರೆಡ್ಡಿ ಸೇರಿದಂತೆ ಕೆಲವರ ಹೆಸರನ್ನು ಮಾತ್ರ ಉಲ್ಲೇಖಿಸಿ ಅವರು ಮುಖ್ಯ ಮಂತ್ರಿಯಾಗಬಾರದೇ
ಮುಖ್ಯಮಂತ್ರಿ ಎಂದು ಪ್ರಶ್ನಿಸಿದರು. ಅವರೆಲ್ಲರಿಗೂ ಯೋಗ್ಯತೆ ಇದೆ, ಅವಕಾಶ ಸಿಗಲ್ಲ ಅಷ್ಟೇ ಎಂದರು.
ಮೈಸೂರು : ಪ್ರೀತಿ-ಪ್ರೇಮದ ಗುಂಗಲ್ಲಿ ಜೀವ ಕಳೆದುಕೊಂಡ ಜೀವಗಳು ಅದೆಷ್ಟೋ, ಜೀವನದಲ್ಲಿ ತೆಗೆದುಕೊಳ್ಳೋ ಒಂದೇ ಒಂದು ನಿರ್ಧಾರ ಬದುಕಿನ ಆಟವನ್ನೇ…
ನಗರಪಾಲಿಕೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆ ಮೈಸೂರು : ರಾಜಧಾನಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿಯ ಸಮಗ್ರ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ 'ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ' ಎಂಬ…
ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…
ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ…
ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ…