ರಾಜ್ಯ

ಜೂನ್.‌23ರಂದು ಇಡಿ ವಿಚಾರಣೆಗೆ ಹಾಜರಾಗುತ್ತೇನೆ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಜೂನ್.‌23ರಂದು ಇಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್‌ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಇಡಿ ನೋಟಿಸ್‌ ಬಂದಿರುವುದು ನಿಜ. ನೋಟಿಸ್‌ ಕೊಟ್ಟಿದ್ದಾರೆ ವಿಚಾರಣೆಗೆ ಹಾಜರಾಗುತ್ತೇನೆ. ಇಡಿಯವರು ಏನೇನು ಕೇಳುತ್ತಾರೋ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎದು ಹೇಳಿದರು.

ಇನ್ನು ಆರೋಪಿ ಐಶ್ವರ್ಯಾಗೌಡ ಜೊತೆ ಯಾವುದೇ ವ್ಯವಹಾರ ಇಲ್ಲ. ಎರಡು ಕಾರ್ಯಕ್ರಮಕ್ಕೆ ಕರೆದಿದ್ದ ಹಿನ್ನೆಲೆ ನಾನು ಭಾಗಿಯಾಗಿದ್ದೆ ಅಷ್ಟೇ. ಇಡಿ ಅಧಿಕಾರಿಗಳ ಸಂಪೂರ್ಣ ತನಿಖೆಗೆ ನಾನು ಸಹಕಾರ ನೀಡುತ್ತೇನೆ ಎಂದರು.

ಆಂದೋಲನ ಡೆಸ್ಕ್

Recent Posts

ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

ಬೆಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಿಮರೋಡಿ ಅವರನ್ನು ದಕ್ಷಿಣ…

15 mins ago

ಇರಾನ್-‌ಇಸ್ರೇಲ್‌ ಸಂಘರ್ಷ: ನಾಳೆ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಳೆ ಸರ್ವ ಪಕ್ಷಗಳ ಸಭೆ ಕರೆದಿದ್ದು, ವಿರೋಧ ಪಕ್ಷಗಳಿಗೆ ಪರಿಸ್ಥಿತಿ…

27 mins ago

ಗುಂಡ್ಲುಪೇಟೆ| ಶಿವಪುರದ ತೋಟದ ಮನೆ ಬಳಿ ಚಿರತೆ ಪ್ರತ್ಯಕ್ಷ: ರೈತರಲ್ಲಿ ಆತಂಕ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಸಮೀಪದ ಕಲ್ಲುಕಟ್ಟೆ ಬಳಿಯ ಜಮೀನಿನ ತೋಟದ ಮನೆಯ ಬಳಿ…

42 mins ago

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಎಂ.ಆರ್.‌ಮಂಜುನಾಥ್‌ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ…

51 mins ago

ತಮಿಳುನಾಡು ವಿಧಾನಸಭಾ ಚುನಾವಣೆ: ಗಡಿಭಾಗದ ಚೆಕ್ ಪೋಸ್ಟ್‌ಗಳಿಗೆ ಡಿವೈಎಸ್ಪಿ ಭೇಟಿ, ಪರಿಶೀಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು : ನೆರೆಯ ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು,…

58 mins ago

ಗಲ್ಲಾಪೆಟ್ಟಿಗೆಯಲ್ಲಿ ಧುರಂಧರ್-‌2 ಅಬ್ಬರ: 800 ಕೋಟಿ ಕ್ಲಬ್‌ ಸೇರುವತ್ತ ಓಟ

ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್-‌2 ದಾಖಲೆಗಳನ್ನು ಮುರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರವು ಬಾಕ್ಸಾಫೀಸ್‌ನಲ್ಲಿ…

1 hour ago