ಶಿವಪುರ ಧ್ವಜ ಸತ್ಯಾಗ್ರಹದ ಕಿಚ್ಚು ಕೇಳಿದ್ದೇನೆ: ಮತ್ತೊಮ್ಮೆ ಆ ರೀತಿ ಹೋರಾಟ ಮಾಡಬೇಕು- ಡಿ.ಕೆ ಶಿವಕುಮಾರ್

ಮಂಡ್ಯ: ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯ. ಶಿವಪುರ ಧ್ವಜ ಸತ್ಯಾಗ್ರಹದ ಕಿಚ್ಚು ಕೇಳಿದ್ದೇನೆ: ಮತ್ತೊಮ್ಮೆ ಆ ರೀತಿ  ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ನುಡಿದರು.

ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆ, ಮಂಡ್ಯ ಜಿಲ್ಲೆ ಶಿವಪುರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಪ್ರತಿಯೊಬ್ಬರಿಗಾಗಿ ಮೇಕೆದಾಟು ಅಭಿಯಾನ ನಡೆಸುತ್ತಿದ್ದೇವೆ. 5 ಸಾವಿರ ಎಕರೆ ಜಮೀನಿನಲ್ಲಿ ಯೋಜನೆ ಅನುಷ್ಟಾನ ಮಾಡಬೇಕು.  ಶಿವಪುರ  ಧ್ವಜ ಸತ್ಯಾಗ್ರಹ ಕಿಚ್ಚು ಕೇಳಿದ್ದೇನೆ. ಮತ್ತೊಮ್ಮೆ ಆ ರೀತಿ  ಹೋರಾಟ ಬೇಕು ಎಂದರು.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ ಬಗ್ಗೆ  ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಹೆಚ್.ಡಿಕೆ ಟೀಕೆ ಮಾಡ್ತಾರೆ. ಈ ಕುರಿತು ಬೇಸರವಿಲ್ಲ. ಇದು ಪಕ್ಷಾತೀತವಾಗಿ ನಡೆಸುತ್ತಿರುವ ಪಾದಯಾತ್ರೆ. ಎಲ್ಲಾ ಪಕ್ಷದವರಿಗೂ ಮೇಕೆದಾಟು ಯೋಜನೆ ಬೇಕು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡುತ್ತೇವೆ.  ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. ಈ ದೇಶದ ಚರಿತ್ರೆಗೆ ಎಲ್ಲರೂ ಪಾಲುದಾರರಾಗಬೇಕು ಎಂದು ತಿಳಿಸಿದರು.

× Chat with us