ಬೆಂಗಳೂರು: ಬಿಜೆಪಿಯವರು ಎಷ್ಟಾದರೂ ಕೂಗಾಡ್ಲಿ…. ಅರಚಾಡ್ಲಿ…. ಬಟ್ಟೆ ಹರ್ಕೊಳ್ಳಲಿ, ಐ ಡೋಂಟ್ ಕೇರ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾತಾನಾಡಿದ ಅವರು, ಬಿಜೆಪಿಯವರು ಪದೇ ಪದೇ ದೂರು, ಮನವಿ ಇಟ್ಕೊಂಡು ರಾಜ್ಯಪಾಲರ ಬಳಿ ಹೋಗಿ ಕಟ್ಕೊಂಡು ನಿಲ್ತಾರೆ ಪಾಪ ಅನ್ಸುತ್ತೆ. ಇವರು ನಿಜವಾಗಲೂ ಅಕ್ರಮಗಳ ದೃಢಪಡಿಸುತ್ತಾರೆ ಎನ್ನುವುದಾದರೆ… ರಾಜ್ಯಪಾಲರ ಬಳಿ ಯಾಕೆ ಹೋಗ್ತಾರೆ? ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಬಳಿ ಹೋಗಿ ದೂರು ಕೊಡ್ಲಿ… ಇವರು ಹೇಗೆ ಅಕ್ರಮಗಳನ್ನು ದೃಢಪಡಿಸುತ್ತಾರೆ ಎಂದು ನನಗೂ ಕೂತಹಲವಿದೆ ಎಂದು ಸವಾಲು ಹಾಕಿದರು.
ವಿಪಕ್ಷ ನಾಯಕ ಆರ್.ಅಶೋಕ್ ಲಾಜಿಕ್ ಪ್ರಕಾರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭಯೋತ್ಪಾಕರಾ? ಕೇಂದ್ರ ಸಚಿವ ವಿ.ಸೋಮಣ್ಣ ಅವರು ಟೆರರಿಸ್ಟಾ? ಬಾಯಿ ಇದೆ ಎಂದು ಸುಮ್ಮನೆ ಮಾತನಾಡಬಾರದು. ವಿರೋಧ ಪಕ್ಷದ ನಾಯಕರರಾಗಿ ಮಾತಿಗೆ ಒಂದು ತೂಕ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ನಾವು ಭಯೋತ್ಪಾದಕರಿಂದ ಹೇಗೆ ಸಲಹೆ ಪಡೆದುಕೊಳ್ಳುತ್ತೇವೆ. ನಮ್ಮ ಸರ್ಕಾರದ ಬಗ್ಗೆ ಬಲವಾದ ಮೂಲವಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಜೆಪಿಯ ನಾಯಕರು ದೂರು ನೀಡಲಿ. ಕೇಂದ್ರದಲ್ಲಿ 10 ವರ್ಷಗಳಿಂದ ಅವರದ್ದೇ ಸರ್ಕಾರವಿದೆ. ಅಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಿದ್ದಾರೆ? ಅಲ್ಲದೇ ಪಾಕಿಸ್ತಾನಿಗಳು ಬೆಂಗಳೂರಿಗೆ ಹೇಗೆ ಬರ್ತಾರೆ? ಹಾಗೂ ಇಸ್ಲಾಂ ಅಹಮದಾಬಾದ್‌ನಿಂದ ಏರ್ ಡ್ರಾಫ್ಟ್ ಆಗ್ತಿದ್ದಾರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರು ಮತ್ತು ಸಚಿವರು, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಇವರೆಲ್ಲ ಭಾರತಕ್ಕೆ ಹೇಗೆ ಬಂದರೂ ಎಂದು ಕೇಳಬೇಕಾಗಿದೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಕೇಂದ್ರದಲ್ಲಿ ನಡೆಯುವ ಹಾಗು-ಹೋಗುಗಳ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಿರಬೇಕು. ಅವರೇ ತಪ್ಪು ಮಾಡಿಕೊಂಡು ತಮ್ಮ ಸರ್ಕಾರದ ಮೇಲೆ ಆರೋಪ ಮಾಡಲು ಬರುತ್ತಾರೆ. ಮೊದಲು ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದಕ್ಕೆ ದಾಖಲೆ ನೀಡಿ. ಅದನ್ನು ಬಿಟ್ಟು ಸರ್ಕಾರಕ್ಕೆ ಪಾಠ ಹೇಳಿಕೊಡಲು ಬರಬಾರದು ಎಂದು ಕಿಡಿಕಾರಿದರು.
ಸರ್ಕಾರದ 60 ಪ್ರಕರಣಗಳಲ್ಲಿ ಸುಮಾರು 43 ಪ್ರಕರಣವನ್ನು ಕ್ಯಾಬಿನೆಟ್ ಉಪಸಮಿತಿಯ ನಿರ್ಧಾರದ ಮೇಲೆ ಹಿಂಪಡೆಯಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಕೂಲಂಕುಷವಾಗಿ ಚರ್ಚೆ ಮಾಡಿದ ನಂತರ ತೀರ್ಮಾನ ಕೈಗೊಂಡು ಕೇಸ್‌ಗಳನ್ನು ವಾಪಾಸ್ ಪಡೆದಿದ್ದೇವೆ. ಅದರಲ್ಲಿ ಏನೂ ತಪ್ಪಿದೆ. ಈ ಕೇಸ್‌ಗಳಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಂಬಂಧಿಸಿದಂತೆ ನಾಲ್ಕೈದು ಕೇಸ್‌ಗಳನ್ನು ಹಿಂಪಡೆದಿದ್ದೇವೆ. ಅಲ್ಲದೇ, ಸಿ.ಟಿ.ರವಿ ಮತ್ತು ಸುಕುಮಾರ್ ಶೆಟ್ಟಿ ಹಾಗೂ ಮೈಸೂರು ಮಹಿಳಾ ಮೋರ್ಚಾ ಕೇಸ್‌ಗಳನ್ನು ಸಹ ವಾಪಾಸ್ ಪಡೆದುಕೊಂಡಿದ್ದೇವೆ. ಹೀಗಾಗಿ ಅವರೆಲ್ಲರೂ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ದೇಶದ್ರೋಹಿ ಅಥವಾ ಭಯೋತ್ಪಾದನೆ ನಡೆಸುವಂತೆ ಕಾಣುತ್ತಿರಬೇಕು. ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮಾತನಾಡಲು ಯಾವುದೇ ವಿಚಾರ ಸಿಗುತ್ತಿಲ್ಲ. ಹಾಗಾಗಿ ಏನೂ ಲಾಜಿಕ್ ಇಲ್ಲದೇ ಸುಖಾ ಸುಮ್ಮನೆ ಹಿಟ್ ಅಂಡ್ ರನ್ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…