ಬೆಂಗಳೂರು: ಶಾಸಕ ಮುನಿರತ್ನ ಅವರು ಆರ್.ಅಶೋಕ್ ವಿರುದ್ಧ HIV ಸೋಂಕು ಹರಡಲು ಷಡ್ಯಂತ್ರ ನಡೆಸಿದ್ದರು ಎಂಬ ಸುದ್ದಿ ನೋಡಿ ನನಗೆ ದಿಗ್ಬ್ರಮೆ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಇಂದು(ಸೆ.21) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಸಕ ಮುನಿರತ್ನ ಅವರು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮೇಲೆ HIV ಸೋಂಕು ಹರಡುವಿಕೆಯ ಸಂಚು ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಕೇಳಿ ನನಗೆ ದಿಗ್ಬ್ರಮೆಯಾಗುತ್ತಿದೆ. ವಿಪಕ್ಷ ನಾಯಕ ಆರ್.ಅಶೋಕ್ ಅವರ ಆರಂಭದ ಮಾತುಗಳನ್ನು ನೋಡಿದ್ದೀನಿ. ಆದರೆ ಎರಡನೇ ಬಾರಿ ಮಾತುಗಳನ್ನು ಕೇಳಿಲ್ಲ ಎಂದು ಹೇಳಿದರು.
ಶಾಸಕ ಮುನಿರತ್ನ ಅವರು ನಡೆಸಿರುವ ಸಂಚಿನ ಬಗ್ಗೆ ಅಶೋಕಣ್ಣ, ವಿಜಯೇಂದ್ರಣ್ಣ ಹಾಗೂ ಸಿ.ಟಿ.ರವಿಯಣ್ಣ ಅವರು ಈ ಸಂಚಿನ ಬಗ್ಗೆ ಮಾತನಾಡಲಿ, ಈ ಬಗ್ಗೆ ಸತ್ಯ ಏನಿದೆ ಎಂಬುದನ್ನು ಕುರಿತು ಪರಿಶೀಲಿಸಿ ತಿಳಿಸಬೇಕು. ನಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಾ.ಮಂಜುನಾಥ್ ಅವರು ಸಹ ಉತ್ತರಿಸಬೇಕು ಎಂದು ಬಿಜೆಪಿ ಶಾಸಕರನ್ನು ಟೀಕಿಸಿದರು.
ಶಾಸಕ ಅಶ್ವತ್ಥ್ ನಾರಾಯಣ್ ಅವರು ಡಿ.ಕೆ.ಬ್ರದರ್ಸ್ ಅವರಿಂದ ಸಂಚು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವತ್ಥ್ ಅವರು ನನ್ನನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಅವರು ನೀಡಿರುವ ಈ ಹೇಳಿಕೆಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದರು.
ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ…
ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ಮಗು ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು…
ಹಾಸನ: ಮೂವರು ಇಟಿಎಫ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ…
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧದ ಬೆಟ್ಟಿಂಗ್ ಹೇಳಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಬೆಟ್ಟಿಂಗ್…
ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಹಳ ಉತ್ಸಾಹದಿಂದ ಭಾಗಿಯಾಗಿದ್ದರು. ತಮಿಳುನಾಡಿನಲ್ಲಿ ಶೇ.82.24% ಮತದಾನ ದಾಖಲಾಗಿದ್ದು,…
ನಂಜನಗೂಡು: ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದರು…