ಬಿಬಿಎಂಪಿ ದಕ್ಷಿಣ ವಾರಂನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಎಷ್ಟು?

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಾರ್ ರೂಂನಲ್ಲಿ ನಡೆಯುತ್ತಿ ಬೆಡ್ ಬ್ಲಾಕಿಂಗ್ ಪ್ರಕರಣ ಇದೀಗ ಸುದ್ದಿಯಾಗಿದ್ದು, ನಿಜಕ್ಕೂ ಅಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಎಷ್ಟು? ಎಂಬ ಅಂಕಿ ಸಂಖ್ಯೆ ಪ್ರತಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ವಾರದ ಹಿಂದೆಯೇ ಬೆಡ್ ಬ್ಲಾಕ್ ದಂಧೆ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾಗಿದ್ದರೂ, ಮಂಗಳವಾರ ಏಕಾಏಕಿ ಬಿಬಿಎಂಪಿ ದಕ್ಷಿಣ ವಾರ್ ರೂಂಗೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸತೀಶ್ ಕೊರೊನಾ ಸೋಂಕಿತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ತೇಜಸ್ವಿ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸುಮಾರು ೧೭  ‘ನಿರ್ದಿಷ್ಟ’ ವ್ಯಕ್ತಿಗಳ ಹೆಸರನ್ನು ಹೇಳಿದ್ದರು.

ಇದೀಗ ವಾರ್ ರೂಂನಲ್ಲಿ ನಿಜಕ್ಕೂ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬ ಅಂಕಿ ಸಂಖ್ಯೆ ಲಭ್ಯವಾಗಿದೆ. ಬಿಬಿಎಂಪಿ ದಕ್ಷಿಣ ವಾರ್ ರೂಂನಲ್ಲಿ ಒಟ್ಟು ೨೦೬ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪೈಕಿ ೧೭ ಮಂದಿಯನ್ನು ಒಂದೇ ಕೋಮಿಗೆ ಸೇರಿದ್ದರಿಂದ ಅವರ ಹೆಸರನ್ನು ಸಂಸದರು ಯಾಕೆ ಪ್ರಸ್ತಾಪಿಸಿದರು? ಇದರ ಹಿಂದಿರುವ ಹಕೀಕತ್ ಏನು? ಎಂಬ ಚರ್ಚೆಗೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿವೆ.

× Chat with us