ರಾಜ್ಯ

ಹನಿಟ್ರ್ಯಾಪ್‌ ಗದ್ದಲ: ಸಿಬಿಐ ತನಿಖೆಗೆ ಆಗ್ರಹಿಸಿದ ಸುರೇಶ್‌ಗೌಡ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಚೀಟಿ ನೀಡಿದವರು ಯಾರು? ಅವರು ಚೀಟಿ ನೀಡಿದ ಬಳಿಕವೇ ಅವರು ಹನಿಟ್ರ್ಯಾಪ್‌ ಬಗ್ಗೆ ಚರ್ಚಿಸಿದರು. ಹಾಗಾಗಿ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿ ಸುರೇಶ್‌ಗೌಡ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು(ಮಾರ್ಚ್‌.21) ಈ ಕುರಿತು ಮಾತನಾಡಿದ ಅವರು, ಶಾಸಕ ಯತ್ನಾಳ್‌ ಅವರು ಮಾತನಾಡುತ್ತಿದ್ದಾಗ ಆಡಳಿತ ಪಕ್ಷದಿಂದ ಅವರಿಗೆ ಒಂದು ಚೀಟಿ ಬಂತು. ಚೀಟಿ ಬಂದ ಮೇಲೆ ಯತ್ನಾಳ್ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತಾಡಿದರು. ಅವರಿಗೆ ಆ ಚೀಟಿ ನೀಡಿದವರು ಯಾರು? ಅಥವಾ ಅವರಿಗೆ ಚೀಟಿ ನೀಡಿದವರು ಸಿಎಂಗೆ ಆಪ್ತರಾ? ಇದರ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಹಿನ್ನೆಲೆ ಏನು?

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಮಾರ್ಷಲ್‌ ಒಬ್ಬರು ಚೀಟಿ ನೀಡಿದರು. ಆ ನಂತರವೇ ಸದನದಲ್ಲಿ ನೇರವಾಗಿ ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಎಂದು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪದ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡಿದ್ದರು.

ಅರ್ಚನ ಎಸ್‌ ಎಸ್

Recent Posts

ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ : ಸಿಎಸ್‌ಕೆ ವಿರುದ್ಧ ಆರ್‌ಆರ್‌ಗೆ ಗೆಲುವು

ಗುವಹಾಟಿ : ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌…

4 hours ago

ಮೈಸೂರು ರೇಸ್ ಕ್ಲಬ್ ಚುನಾವಣೆ; ಸದಸ್ಯರಾಗಿ ಐವರ ಆಯ್ಕೆ

ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…

6 hours ago

ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಹೆದ್ದಾರಿಗಿಲ್ಲ ಪ್ರವೇಶ

ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…

7 hours ago

ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ : ಇರಾನ್‌ ಸ್ಪಷ್ಟನೆ

ಟೆಹ್ರಾನ್‌ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…

7 hours ago

ಹೊರ್ಮುಜ್‌ ಜಲಸಂಧಿ ಮುಕ್ತಗೊಳಿಸಿ ; ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್‌ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…

7 hours ago

ದೇಶದಲ್ಲೇ ಮೊದಲ ಮಕ್ಕಳ ಬೃಹತ್ ಆಸ್ಪತ್ರೆ ಬೆಂಗಳೂರಿನಲ್ಲಿ

ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…

8 hours ago