ರಾಜ್ಯ

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಅಸ್ತು

ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

ವಾದ ಮತ್ತು ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದ ಉಚ್ಚ ನ್ಯಾಯಾಲಯ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆ, 1988 ರ ಸೆಕ್ಷನ್ 17(ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಗೆ ಸೂಚಿಸಿದ್ದಾರೆ.ಇದೇ ವೇಳೆ ಹಾಲಿ ಕರ್ನಾಟಕ ಕೈಮಗ್ಗ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆಗೆ ಉಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿದೆ.

ಈ ಹಿಂದೆ ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು. ರೋಹಿಣಿ ಸಿಂಧೂರಿ ಅವರು ನಿಯಮಗಳನ್ನು ಮೀರಿ ಇಲಾಖೆ ಅನುಮತಿ ಪಡೆಯದೆ ದುಡ್ಡು ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತ ಪ್ರಾಥಮಿಕ ತನಿಖೆಯಲ್ಲಿ ಅವರು ಅಸಮರ್ಪಕ ಉತ್ತರ ನೀಡಿದ್ದರು ಮತ್ತು ಯಾವುದೇ ದಾಖಲೆ ನೀಡಿರಲಿಲ್ಲ.

ಬಟ್ಟೆ ಬ್ಯಾಗ್ ಖರೀದಿಯಲ್ಲಿ 9.ರೂಗೆ ಆಗುವ ಒಂದು ಬ್ಯಾಗ್‌ಗೆ 52ರೂ ಕೊಟ್ಟು ಖರೀದಿ ಮಾಡಿದ್ದಾರೆ. ಖರೀಗೆ ಒಟ್ಟು 7 ಕೋಟಿ ಖರ್ಜುಮಾಡಿದ್ದಾರೆ. ಖರೀದಿಯಲ್ಲಿ ಕಿಕ್‌ ಬ್ಯಾಕ್‌ ನಡೆದಿದೆ ಎಂದು ಅವರ ಮೇಲೆ ಅರೋಪವಿದೆ. ಯಾವುದೇ ಜಿಲ್ಲಾಧಿಕಾರಿಗೆ ಆಡಳಿತಾತ್ಮಕವಾಗಿ 2 ಕೋಟಿ ರೂಪಾಯಿಗೆ ಅನುಮೋದನೆ ನೀಡಲು ಅವಕಾಶ ಇದೆ. ಆದರೆ ರೋಹಿಣಿ ಅವರು 7 ಕೋಟಿ ರೂಪಾಯಿ ಅಧಿಕ ಮೊತ್ತಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಸಾ.ರಾ.ಮಹೇಶ್ ನೇರ ಆರೋಪ ಮಾಡಿದ್ದರು. ಮೈಸೂರು ಮೂಲದ ಎನ್.ಆರ್.ರವಿ ಚಂದ್ರೇಗೌಡ ಎಂಬವರು ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು

 

ಆಂದೋಲನ ಡೆಸ್ಕ್

Recent Posts

ಚಾ.ನಗರ | ಶೆಡ್‌, 4ಸಾವಿರ ಕೋಳಿ ಬೆಂಕಿಗಾಹುತಿ ; 25 ಲಕ್ಷ ನಷ್ಟ

ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…

5 hours ago

ಸಿಎನ್‌ಜಿ ಸಮಸ್ಯೆ ಇಲ್ಲ : ಸಚಿವ ಮುನಿಯಪ್ಪ

ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…

5 hours ago

ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…

5 hours ago

ದಿನಗೂಲಿ ನೌಕರರಿಗೂ ಆರೋಗ್ಯ ವಿಮಾ ಸೌಲಭ್ಯ

ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…

6 hours ago

ಜನಗಣತಿಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿ ; ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ

ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…

6 hours ago

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್

ಹೊಸದಿಲ್ಲಿ : ರೈಲು ಪ್ರಯಾಣ ಆರಂಭವಾಗುವ 8 ಗಂಟೆ ಮೊದಲು ನಿಮ್ಮ ಟಿಕೆಟ್ ರದ್ದುಪಡಿಸದಿದ್ದರೆ ಟಿಕೆಟ್‌ನ ಸಂಪೂರ್ಣ ಹಣ ಖೋತಾ…

7 hours ago