ಬೇಸಿಗೆ ಕಾಲ ಆರಂಭವಾಗಿದ್ದು, ಈ ಅವಧಿಯಲ್ಲಿ ಅತಿಯಾದ ಉಷ್ಣಾಂಶದಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆ ಸಂಭವಿಸುವ ಸಾಧ್ಯತೆಯಿದೆ. ಅತಿಯಾದ ಉಷ್ಣಾಂಶದಿಂದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿಗಳ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಹೊರಡಿಸಿದೆ.
ಹೆಚ್ಚು ನೀರು ಕುಡಿಯುವುದು
• ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ.
• ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ.
• ಮೌಖಿಕ ಪುನರ್ಜಲೀಕರಣ ದ್ರಾವಣ (Oral Rehydration Solution – ORS), , ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
• ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ. ಅನಾನಸ್, ಸೌತೆಕಾಯಿ, ಲೆಟೂಸ್, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು
• ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
• ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ದೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ. ಬಿಸಿಲಿನಿಂದ ರಕ್ಷಣೆ ಪಡೆಯುವುದು ಉತ್ತಮ.
• ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
• ಪ್ರತ್ಯೇಕವಾಗಿ / ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು.
• ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು / ಷಟರ್ ಗಳನ್ನು ಬಳಸಿ ಹಾಗೂ ರಾತ್ರಿಯ ಸಮಯದಲ್ಲಿ ಕಿಟಕಿಗಳನ್ನು ತೆರೆದಿಡಿ.
• ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.
• ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.
ವಯಸ್ಕರಲ್ಲಿ
• ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ದ್ವಂದ್ವ. ಗಾಬರಿಗೊಳ್ಳುವುದು ಅಥವಾ ಕೋಮಾ ಸ್ಥಿತಿಯನ್ನು ತಲುಮವುದು.
• ಬಿಸಿ ಹಾಗೂ ಕೆಂಪಾದ ಬಗು ಚರ್ಮ
• ದೇಹದ ಉಷ್ಣತೆ ≥40ಲಿಅ ಅಥವಾ 104ಲಿಈ
• ಆತಿಯಾಗಿ ನಡಿಮಿಡಿಯೊಳುವುದು.
• ಕನಿಷ್ಠ ಮೂತ್ರ ವಿಸರ್ಜನೆಯ ಪ್ರಮಾಣ
• ಅತಿಯಾದ (Throbbing) ತಲೆನೋವು
• ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು
• ಆತಂಕ, ತಲೆಸುತ್ತುವಿಕೆ ಹಾಗೂ ಪ್ರಜ್ಞೆ ತಪ್ಪುವುದು
• ಮಾಂಸ ಖಂಡಗಳಲ್ಲಿ ಸುಸ್ತು ಅಥವಾ ಸೆಳೆತ
• ಆಲಸ್ಯ / ಅರೆ ಪ್ರಜ್ಞಾವಸ್ಥೆ
• ಮೂರ್ಛೆ ಹೋಗುವುದು
• ವಾಕರಿಕೆ ಮತ್ತು ವಾಂತಿ
• ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ
• ಹೆಚ್ಚಿದ ಹೃದಯದ ಬಡಿತ/ ವೇಗವಾದ ಉಸಿರಾಟ
• ಸಹಾಯಕ್ಕೆ ಕಾಯುತ್ತಿರುವ ಅವಧಿಯಲ್ಲಿ ವ್ಯಕ್ತಿಯ ದೇಹದ ಉಷಾಂಶವನ್ನು ಈ ಕೆಳಕಂಡ ವಿಧಾನದಲ್ಲಿ ಕಡಿಮೆಗೊಳಿಸಿ
ಮಕ್ಕಳಲ್ಲಿ
• ಆಹಾರ ಸೇವಿಸಲು ನಿರಾಕರಿಸುವುದು
• ದೇಹದ ಭಾಗಗಳಿಗೆ ಹಾಗೂ ಬಟ್ಟೆ ಮೇಲೆ ತಣ್ಣಗಿನ ನೀರನ್ನು ಹಾಕುವುದು.
• ಹಾಗೂ ವ್ಯಕ್ತಿಯ ದೇಹದ ಮೇಲೆ ಹೆಚ್ಚು ಗಾಳಿಯನ್ನು ಬೀಸುವುದು
• ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು
• ಆಲಸ್ಯ/ ಅರೆ ಪ್ರಜ್ಞಾವಸ್ಥೆ
• ಮೂರ್ಛೆ ಹೋಗುವುದು
• ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ
ಸಹಾಯಕ್ಕಾಗಿ ಕಾಯುತ್ತಿರುವ ಅವಧಿಯಲ್ಲಿ ವ್ಯಕ್ತಿಯ ದೇಹದ ಉಷ್ಣವನ್ನು ಈ ಕೆಳಕಂಡ ವಿಧಾನದಲ್ಲಿ ಕಡಿಮೆಗೊಳಿಸಿ
• ಸಾಧ್ಯವಿದ್ದಲ್ಲಿ ತಂಪಾದ ಪ್ರದೇಶಕ್ಕೆ ಸ್ಥಳಾಂತರಗೊಳಿಸಿ,
• ದೇಹದ ಭಾಗಗಳಿಗೆ ಹಾಗೂ ಬಟ್ಟೆ ಮೇಲಿನ ತಣ್ಣಗಿನ ನೀರನ್ನು ಹಾಕುವುದು,
• ಹಾಗೂ ವ್ಯಕ್ತಿಯ ದೇಹದ ಮೇಲೆ ಹೆಚ್ಚು ಗಾಳಿಯನ್ನು ಬೀಸುವುದು
• ಯಾರಾದರೂ ಹೆಚ್ಚಿದ ದೇಹದ ಉಷ್ಣಾಂಶ ಹಾಗೂ ಪ್ರಜ್ಞೆ ತುವುದು, ಗೊಂದಲದಲ್ಲಿದ್ದು, ಬೆವರುವಿಕೆಯು ಸ್ಥಗಿತವಾಗಿದ್ದರೆ ತಕ್ಷಣವೇ 108/102 ಗೆ ಕರೆ ಮಾಡಬಹುದು.
ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ…
ಬೆಂಗಳೂರು: ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ…
ಬೆಂಗಳೂರು: ಮನರೇಗಾ ಮರು ಜಾರಿ ಮಾಡುವವರೆಗೆ ನಾವು ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು…
ಮಂಡ್ಯ: ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಮೇಲೆ ದಾಳಿ ನಡೆಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು…
ಬೆಂಗಳೂರು: ಮನರೇಗಾ ಹೆಸರು ಬದಲಾವಣೆ ಮಾಡಿ ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು…
ಚಾಮರಾಜನಗರ: ನಂಜೇದೇವನಪುರ ಗ್ರಾಮದಲ್ಲಿ ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಹುಲಿ ಮರಿಯನ್ನು…