ರಾಜ್ಯ

ಹೇಮಾವತಿ ಕೆನಾಲ್‌ ಕದನ: ಕೆ.ಎನ್‌.ರಾಜಣ್ಣ ಪುತ್ರನಿಗೆ ಶಾಸಕ ರಂಗನಾಥ್‌ ತಿರುಗೇಟು

ಬೆಂಗಳೂರು: ಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಹೇಮಾವತಿ ಕೆನಾಲ್‌ ವಿಚಾರದಲ್ಲಿ ಶಾಸಕ ರಂಗನಾಥ್‌ ಬೆದರಿಕೆ ಹಾಕುತ್ತಿದ್ದಾರೆ ಎಂಬ ಹೇಳಿಕೆಗೆ ರಂಗನಾಥ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌24) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಣಿಗಲ್‌ನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಚಿವ ಸಂಪುಟದಲ್ಲಿ ನಮ್ಮ ಕ್ಷೇತ್ರಕ್ಕೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಆದರೆ ರಾಜೇಂದ್ರ ರಾಜಣ್ಣ ಅವರು ನಾನು ಫೋನ್‌ ಮಾಡಿ ಬೆದರಿಕೆ ಹಾಕುತ್ತೇನೆಂದು ಹೇಳುತ್ತಾರೆ. ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನೊಬ್ಬ ಸಾಮಾನ್ಯ ರೈತನ ಮಗ ಎಂದು ಟಾಂಗ್‌ ನೀಡಿದ್ದಾರೆ.

ನಾನು ಫೋನ್‌ನಲ್ಲಿ ಮಾತನಾಡಿದರೆ ಅದು ಬೆದರಿಕೆ ಹೇಗೆ ಆಗುತ್ತದೆ? ರಾಜ್ಯದಲ್ಲಿ ನಮ್ಮ ಸರ್ಕಾರವೇ ಬಂದಿದೆ. ಜನ ಪರ ನಾವು ಶಿರಸಾವಹಿಸಿ ಕೆಲಸ ಮಾಡೋಣ ಎಂದಿದ್ದೇನೆ. ನಮ್ಮ ಕ್ಷೇತ್ರದ ಸಹಕಾರ ಸಂಘದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರೇ ಹಲವು ವರ್ಷಗಳಿಂದ ಇದ್ದಾರೆ. ಅದಕ್ಕೆ ನಾನು ಕಾಂಗ್ರೆಸ್‌ ಬೆಂಬಲಿಗರನ್ನು ತರುವ ಪ್ರಯತ್ನ ಮಾಡುತ್ತೇನೆ. ಹೀಗಾಗಿ ಸಹಕಾರ ಸಂಘದಿಂದ ಸಾಲ ನೀಡಿ ಸದನದಲ್ಲಿ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಸಚಿವ ರಾಜಣ್ಣ ಅವರೊಂದಿಗೆ ನನಗೆ ವೈಮನಸ್ಸು ಇಲ್ಲ, ತುಂಬಾ ಸಲುಗೆಯಿಂದ ಇದ್ದೇನೆ. ಆದರೆ ನನ್ನ ಮೇಲೆ ಯಾಕೆ ಭಿನ್ನಾಭಿಪ್ರಾಯ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಬೆದರಿಕೆ ಹಾಕೋ ಗುಣ ಇಲ್ಲ, ಡಿ.ಕೆ.ಶಿವಕುಮಾರ್‌ ಅವರು ಶಾಸಕರಾಗಿ ಹೇಗೆ ನಡೆದುಕೊಳ್ಳಬೇಕೆಂದು ಹೇಳಿ ಕೊಟ್ಟಿದ್ದಾರೆ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಸಾಲು ಸಾಲು ಸರಣಿ ರಜೆ : ಮೈಸೂರಿನ ಪ್ರವಾಸಿ ತಾಣಗಳಲ್ಲಿ ಜನಸ್ಥೋಮ

ಮೈಸೂರು : ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸಾಲು ಸಾಲು ಸರಣಿ ರಜೆ ಹಿನ್ನೆಲೆ ಮೈಸೂರಿನ ಪ್ರಮುಖ ಪ್ರವಾಸಿ…

30 mins ago

ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್‌ ಟಿಕೆಟ್‌ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು…

1 hour ago

ಜೂಜಾಡುವ ವೇಳೆ ಪೊಲೀಸರ ದಾಳಿ: ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಹಾಸನ: ಜೂಜಾಡುವ ವೇಲೆ ಪೊಲೀಸರು ದಾಳಿ ನಡೆಸಿದ ಪರಿಣಾಮ ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ…

1 hour ago

ಮೈಸೂರಿನಲ್ಲಿ ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ

ಮೈಸೂರು: ನಾಡಿನಾದ್ಯಂತ ರಂಜಾನ್‌ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ…

2 hours ago

ತೆಲುಗು ಚಿತ್ರರಂಗದ ಖ್ಯಾತ ನಟರ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿ: ಕಾರಣ ಇಷ್ಟೇ

ಬೆಂಗಳೂರು: ಧುರಂಧರ್‌-2 ಚಿತ್ರವನ್ನು ಹಾಡಿ ಹೊಗಳಿರುವ ತೆಲುಗು ಚಿತ್ರರಂಗದ ಖ್ಯಾತ ನಟರ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ. ತೆಲುಗಿನ ಖ್ಯಾತ…

2 hours ago

ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಸುರಿದ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ

ಬೆಂಗಳೂರು: ರಾಜ್ಯದಲ್ಲಿ ಇದಕ್ಕಿದ್ದಂತೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ದಾಖಲಾಗಿದ್ದರಿಂದ ಮತ್ತೆ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಕೂಡಲೇ…

2 hours ago