Increasing heart attacks: A growing concern among the common people
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳಿಗೆ, ಜನರ ಜೀವನಶೈಲಿಯೇ ಪ್ರಮುಖ ಕಾರಣವಾಗಿದ್ದು, ಕೋವಿಡ್ ನಂತರ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣ ಶೇ.5ರಷ್ಟು ಹೆಚ್ಚಾಗಿದೆ ಎಂದು ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ಅಧ್ಯಕ್ಷರೂ ಆಗಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ತಿಳಿಸಿದ್ದಾರೆ.
12 ಜನ ತಜ್ಞರನ್ನೊಳಗೊಂಡ ಸಮಿತಿಯ ವರದಿಯನ್ನು ಸೋಮವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹೃದಯಾಘಾತಕ್ಕೊಳಗಾದ 251 ಜನರನ್ನು ಸಮಿತಿ ಅಧ್ಯಯನಕ್ಕೊಳಪಡಿಸಿದೆ ಹಾಗೂ ಕೋವಿಡ್‌ಗಿಂತ ಮೊದಲು 2019 ರಲ್ಲಿನ ಹೃದಯಾಘಾತದ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದು ಹೇಳಿದರು.
ಹಠಾತ್ ಹೃದಯಾಘಾತಕ್ಕೆ ಮಧುಮೇಹ, ರಕ್ತದೊತ್ತಡ, ಒಬೆಸಿಟಿ, ಜೀವನಶೈಲಿ, ಸ್ಟಿರಾಯ್ಡ್ ಬಳಕೆ, ಒತ್ತಡದ ಜೀವನ ಕಾರಣವಾಗಿವೆ. ಬಹು ವಿಶೇಷ ರೋಗ (ಮಲ್ಟಿ ಸ್ಪೆಷಲ್ ಡಿಸೀಸ್) ಗಳ ವ್ಯವಸ್ಥೆಯಿಂದಾಗಿ ಹೃದ್ರೋಗಗಳು ಹೆಚ್ಚುತ್ತಿವೆ ಎಂದರು.
ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಪ್ರಾಂಕಿಯಾಟಿಸ್‌ನಲ್ಲಿ ಬಿಡಾಟಾ ಸೆಲ್ ಫಂಕ್ಷನ್‌ನಿಂದ ಮಧುಮೇಹ ಹೆಚ್ಚುತ್ತಿದೆ. ವರ್ಕ್ ಫ್ರಂ ಹೋಂ ಸಂದರ್ಭದಲ್ಲಿ ಕಂಪ್ಯೂಟರ್ ಮುಂದೆ ಕುಳಿತವರಿಗೆ ದೈಹಿಕ ಚಟುವಟಿಕೆಗಳಿರುವುದಿಲ್ಲ. ಇದು ಕೂಡ ಹೃದಯಾಘಾತ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದರು.
ಜೀವನಶೈಲಿಯಿಂದ ಹೃದ್ರೋಗದ ಅಪಾಯಗಳು (ರಿಸ್ಕ್ ಫ್ಯಾಕ್ಟರ್ರಸ) ಹೆಚ್ಚುತ್ತಿವೆ. ಪರಿಸರ ಮಾಲಿನ್ಯ, ಜೀವನಶೈಲಿಯಿಂದ ಶೇ.80 ರಷ್ಟು ಹೃದ್ರೋಗಗಳು ಸಂಭವಿಸಿದರೆ ಬಾಕಿ ಇರುವ ಶೇ.20 ರಷ್ಟು ಪ್ರಕರಣಗಳ ಕಾರಣಗಳ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯುತ್ತಿವೆ ಎಂದರು.
ಎಲ್ಲಾ ಜಿಲ್ಲೆಗಳಲ್ಲಿ ಸಂಭವಿಸಿರುವ ಹೃದಯಾಘಾತ ಪ್ರಕರಣಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. 251 ಜನರಲ್ಲಿ ಶೇ.19 ರಷ್ಟು ಮಂದಿ ಕೋವಿಡ್ ಸೋಂಕಿಗೆ ಸಿಲುಕಿದ್ದರು. ಒಟ್ಟು ಜನರಲ್ಲಿ ಶೇ.98 ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರು ಎಂದು ಹೇಳಿದ ಅವರು, 2019 ರ ನಂತರ ಹೃದಯಾಘಾತದ ಸಮಸ್ಯೆಗಳು ಶೇ.5 ರಷ್ಟು ಹೆಚ್ಚಾಗಿದೆ ಎಂದು ಪುನರುಚ್ಚರಿಸಿದರು.
ವರದಿ ಸಲ್ಲಿಕೆ
ತಜ್ಞರ ಸಮಿತಿ ಸಲ್ಲಿಸಿರುವ ವರದಿ ಪ್ರಕಾರ, ಹೃದಯಾಘಾತಕ್ಕೆ ಧೂಮಪಾನ ಮತ್ತು ಕೊಲೆಸ್ಟ್ರಾಲ್ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಧೂಮಪಾನಿಗಳಲ್ಲಿ ಶೇ.51ರಷ್ಟು ಹೃದಯಾಘಾತದ ಅಪಾಯ ಹೆಚ್ಚಿದೆ. 2019ರ ಮೊದಲು ಈ ಪ್ರಮಾಣ ಶೇ.48.8 ರಷ್ಟಿತ್ತು. 2019 ರಲ್ಲಿ ಶೇ.13.9 ರಷ್ಟು ಜನರಲ್ಲಿ ಮಧುಮೇಹದಿಂದ ಹೃದಯಾಘಾತವಾಗುತ್ತಿದ್ದರೆ, ಈಗ ಅದು ಶೇ.20.5 ರಷ್ಟು ಹೆಚ್ಚಾಗಿದೆ. ಅಧಿಕ ರಕ್ತದೊತ್ತಡದ ಅಪಾಯ ಶೇ.13.9 ರಿಂದ ಶೇ.17.6 ಕ್ಕೆ ಏರಿಕೆಯಾಗಿದೆ. ಕೊಲೆಸ್ಟ್ರಾಲ್‌ನ ಅಸ್ವಸ್ಥತೆಯ ಅಪಾಯ ಶೇ.34.8 ರಿಂದ 44.1 ರಷ್ಟು ಹೆಚ್ಚಾಗಿದೆ. ಕೌಟುಂಬಿಕ ಹಿನ್ನೆಲೆಯ ಆತಂಕಗಳು ಶೇ.11.6 ರಿಂದ 14.7 ಕ್ಕೆ ಹೆಚ್ಚಾದರೆ ಬೊಜ್ಜಿನ ಕಾರಣ ಶೇ.9.6 ರಿಂದ 11.7 ರಷ್ಟು ಹೆಚ್ಚಾಗಿದೆ ಎಂದು ರವೀಂದ್ರನಾಥ್ ತಿಳಿಸಿದರು.
218 ಪುರುಷರು,
251 ಜನರ ಅಧ್ಯಯನದಲ್ಲಿ 124 ಮಂದಿ ಪ್ರಮುಖವಾಗಿ ಬೆಂಗಳೂರಿನವರಾಗಿದ್ದು, ಚಾಲಕರು ಹಾಗೂ ಕಾರ್ಮಿಕ ವರ್ಗಕ್ಕೆ ಸೇರಿದ್ದಾರೆ. 218 ಮಂದಿ ಪುರುಷರು, 33 ಮಂದಿ ಮಹಿಳೆಯರನ್ನು ತಪಾಸಣೆಗೊಳಪಡಿಸಲಾಗಿದೆ. 77 ಮಂದಿ ಈ ಯಾವುದೇ ಸಮಸ್ಯೆಗಳಿಲ್ಲದೆ ಹೃದಯಾಘಾತಕ್ಕೊಳಗಾಗಿದ್ದು, ಕಾರಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಮೂಲಕ ಹೃದಯಾಘಾತಕ್ಕೆ ಸಂಬಂಧಪಟ್ಟಂತೆ ಕೋವಿಡ್ ಹಾಗೂ ಕೋವಿಡ್ ಲಸಿಕೆ ಮೇಲಿದ್ದ ಅನುಮಾನವನ್ನು ತಜ್ಞರ ಸಮಿತಿ ನಿವಾರಣೆ ಮಾಡಿದೆ.
ಬೆಂಗಳೂರು: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.…
ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾಗಿದ್ದಾರೆ. ಅಜಿತ್…
ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…