ರಾಜ್ಯ

ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಎಚ್‌ಡಿಕೆ

ಬೆಂಗಳೂರು: ಹಾಸನ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತು.

ಎಚ್‌ಡಿಕೆ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರನ್ನು ಭೇಟಿಯಾಗಿ ಪೆನ್‌ಡ್ರೈವ್‌ ಪ್ರಕರಣದಲ್ಲಿ ನ್ಯಾಯ ಕೊಡಿಸಿಕೊಡುವಂತೆ ಮನವಿ ಮಾಡಿತು.

ನಂತರ ಮಾಧ್ಯಮಗೋಷ್ಠೀ ನಡೆಸಿ ಮಾತನಾಡಿದ ಎಚ್‌ಡಿಕೆ, ಎಚ್‌ಡಿ ರೇವಣ್ಣ ವಿಚಾರದಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಯೂ ಕೂಡಾ ಈವರೆಗೆ ಯಾಕೆ ಯಾವುದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲ್ಲ ಎಂದು ಕಿಡಿಕಾರಿದರು.

ಪ್ರಜ್ವಲ್‌ ಹಾಗೂ ರೇವಣ್ಣ ಪ್ರಕರಣ ದಾರಿ ತಪ್ಪುತ್ತಿದೆ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಅದು ಯಾರೇ ಆಗುದ್ದರೂ ಸಹಾ. ಇವರ ತನಿಖೆ ಮಾಡುತ್ತಿರುವುದನ್ನು ನೋಡಿದರೇ ಇವರ ಉದ್ದೇಶ ತಿಳಿಯುತ್ತದೆ. ತನಿಖೆ ಆರಂಭವಾದಾಗಿನಿಂದಲೂ ಮಂದಗತಿಯಿಂದಲೇ ತನಿಖೆ ಸಾಗುತ್ತಿದೆ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ ಎಂದರು.

ಕೃಷ್ಣ ಭೈರೇಗೌಡರ ಹೇಳಿಕೆಯನ್ನು ಪ್ರಸ್ತಾಪಿಸಿ, ಕೃಷ್ಣೇ ಭೈರೇಗೌಡರು ರಾಜ್ಯದಲ್ಲಿ ಮಾನಹರಣ ಶೀಲಾಹರಣ ಪದಗಳನ್ನು ಬಳಿಸಿದ್ದೀರಿ. ನೂರಾರು ಮಹಿಳೆಯರ ಮಾನ ಹಾನಿಯಾಗಿದೆ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಎಚ್‌ಡಿಕೆ ಪೆನ್‌ಡ್ರೈವ್‌ ಜೇಬಿನಲ್ಲಿದೆ ಎಂದು ಹೇಳುತ್ತಾರೆ. ನಾನು ಇಂತಹ ಪೆನ್‌ಡ್ರೈವ್‌ ಬಿಡುತ್ತೇನೆ. ಇದರ ಮೇಲೆ ಕ್ರಮ ಜರುಗಿಸುವದಾದರೇ ಈ ಪೆನ್‌ ಡ್ರೈವ್‌ ಕೊಡುತ್ತೇನೆ ಎಂದು ನಿಮ್ಮ ಸಿಎಂ ಹಾಗೂ ಸ್ಪೀಕರ್‌ ಅವರಿಗೆ ಹೇಳಿದೆ. ವರ್ಗಾವಣೆ ದಂಧೆ ಸೇರಿದಂತೆ ಸಿಎಸ್‌ಆರ್‌ ಫಂಡ್‌ ಎಲ್ಲಾ ಡಾಕ್ಯೂಮೆಂಟ್‌ ಪೆನ್‌ಡ್ರೈವ್‌ ಇರುವುದು ನನ್ನ ಬಳಿ, ನಿಮ್ಮ ಬಳಿಯಿರುವ ಅಶ್ಲೀಲ ಪೆನ್‌ಡ್ರೈವ್‌ ಅಲ್ಲ ಎಂದಿದ್ದಾರೆ.

ಇನ್ನು ಡಿಕೆಶಿ ಅವರನ್ನು ಎಚ್‌ಡಿ ಕುಮಾರಸ್ವಾಮಿ ಅವರು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್‌ ಅವರ ಕಥೆಗೆ ನಾನೇ ನಾಯಕನಾಗಬೇಕು. ಅವರ ಕಥೆಗೆ ನನ್ನನ್ನು ನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ. ಅದು ನನಗೆ ಸಂತೋಷ ನೀಡಿದೆ ಎಂದು ಎಚ್ಡಿಕೆ ಕುಹಕವಾಡಿದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಓದುಗರ ಪತ್ರ: ಫಲಪ್ರದವಾಗಲಿ ಮಾತುಕತೆ!

ಕೊನೆಗೂ ಘೋಷಣೆಯಾಗಿದೆ ತಾತ್ಕಾಲಿಕ ಕದನ ವಿರಾಮ ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ ನಿಟ್ಟುಸಿರು ಬಿಟ್ಟಿದೆ ಜನಜಗ! ಸಿಟ್ಟು ಸೆಡವು ಬದಿಗಿರಿಸಿ ನಡೆಯಲಿ…

8 mins ago

ಓದುಗರ ಪತ್ರ: ಆಟೋ ಗ್ಯಾಸ್ ಅಭಾವ ಕೃತಕವೋ? ನೈಜವೋ?

ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು  ಕೆಜಿಗೆ ರೂ. ೮೯ ಇದ್ದ  ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ…

10 mins ago

ಓದುಗರ ಪತ್ರ: ಯುದ್ಧ ಪೂರ್ಣ ನಿಲ್ಲಲಿ, ಶಾಂತಿ ನೆಲೆಸಲಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ   ಅಲ್ಪ ವಿರಾಮವನ್ನು ಘೋಷಿಸಲಾಗಿದೆ.  ಈ  ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ…

12 mins ago

ಓದುಗರ ಪತ್ರ: ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್  ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ಸರಗೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದರೂ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೦೮ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ತುರ್ತು ಸಂದರ್ಭದಲ್ಲಿ…

15 mins ago

‘ದುರಂಧರ್’- ನಾಯಕ ಗುಪ್ತಚರನಲ್ಲ, ಯೋಧನೂ ಅಲ್ಲ!’

ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಚಾಡ್ ಸ್ಟಹೆಲ್ಸ್ಕಿ ನಿರ್ದೇಶನದ john wick" ಸರಣಿ ಚಿತ್ರಗಳಲ್ಲಿನ ಅಂತ್ಯವಿಲ್ಲದ ಶವಗಳ ಎಣಿಕೆ, ಕ್ವೆಂಟಿನ್ ಟರೆಂಟಿನೋ…

17 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ:  ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಪ್ರಮಾಣಪತ್ರ, ಉಲ್ಲಂಘನೆ

ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಹಾಡೊಂದು ದೇಶಾದ್ಯಂತ ಸುದ್ದಿ ಮಾಡಿತಷ್ಟೇ. ಅದರ ಪ್ರಸ್ತಾಪ ಲೋಕಸಭೆಯಲ್ಲೂ ಆಯಿತು. ವಾರ್ತಾ ಮತ್ತು ಪ್ರಸಾರ…

32 mins ago