ಹಸಗೂಲಿ ಪಾರ್ವತಾಂಭೆ ದೊಡ್ಡ ಜಾತ್ರೆಗೆ ಹರಿದು ಬಂದ ಜನಸಾಗರ

ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರೆ ಮಂಗಳವಾರ ಅದ್ದೂರಿಯಿಂದ ನೆರವೇರಿತು.

ಹಸಗೂಲಿ ಗ್ರಾಮದಿಂದ ಸೋಮವಾರ ಮದ್ಯಾಹ್ನ ಪಾರ್ವತಾಂಭೆ ದೇವಿಯ ವಿಗ್ರಹವನ್ನು ಮೂಲ ಸ್ಥಳವಾದ 20 ಕಿ.ಮೀ ದೂರದ ಕಸಗಲಪುರ ಕಾಡಿನಲ್ಲಿ ನೆಲೆಸಿರುವ ಮೂಲ ಸ್ಥಳಕ್ಕೆ ಕೊಂಡೋಯ್ಯಲಾಯಿತು ಸಾವಿರಾರು ಭಕ್ತರು ಗ್ರಾಮಸ್ಥರು ಸೊಮವಾರ ದೇವರನ್ನು‌ಗ್ರಾಮದಿಂದ ಬೀಳ್ಕೊಟ್ಟರು ನಂತರ ಮಂಗಳವಾರ ಬೆಳಿಗ್ಗೆ ಆಲತ್ತೂರು,

ಶೆಟ್ಟಹಳ್ಳಿ ಮೂಲಕ ದೇವರನ್ನು ಹೊತ್ತು ತಂದು ನಂತರ ಪಾರ್ವತಾಂಭೆ ಮಾರಮ್ಮ ತಾಯಿಯನ್ನು ಅಲಂಕಾರ ಮಾಡಿ ಹೂವಿನಿಂದ‌ ಸಿಂಗಾರಗೊಂಡ ರಥದಲ್ಲಿ ಕೂರಿಸಿ ಛತ್ರಿ ಚಾಮರದ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವನ್ನು ಎಳೆಯಲಾಯಿತು ಮಂಗಳವಾರ ಮಧ್ಯಾಹ್ನ, ಇಂದು ರಾತ್ರಿ ಮತ್ತು ನಾಳೆ ಬೆಳಿಗ್ಗೆ ದೇವರ ರಥದ ಮೆರವಣಿಗೆ ನಡೆಸಲಾಗುವುದು.

ಗ್ರಾಮದ ಜಾತ್ರೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದೊಡ್ಡ ಜಾತ್ರೆಯಾಗಿದ್ಸು ಸುಮಾರು ಒಂದು ಲಕ್ಷದ ವರೆಗೆಜನರುಸೇರಿದ್ದು ಐವತ್ತು ಸಾವಿರಿಕ್ಕಿಂತ ಹೆಚ್ಚು ಜಾನುವಾರುಗಳು ಆಗಮಿಸಿವೆ ಎಂದು ಅಂದಾಜು ಮಾಡಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

× Chat with us