ಧಾರವಾಡ : ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ? ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಸರ್ಕಾರ ಬಿಳಿಸೋಕೆ ಹೋಗಿಲ್ಲ. ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ? ಕಾಂಗ್ರೆಸ್‌ನವರು ಹಾಲು ಕುಡಿದು ಸಾಯೋಕೆ ತಯಾರಾಗಿದ್ದಾರೆ. ಬಿಜೆಪಿಯವರು ನಾವು ಸರ್ಕಾರ ಬೀಳಿಸುವ ಪಾಪದ ಕೆಲಸ ಮಾಡೋದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರು 2 ದರ್ಜೆ ನಾಯಕರಾಗಿ ಕೆಲಸ ಮಾಡ್ತಾ ಇದ್ದಾರೆ. ಲಿಂಗಾಯತರು ಗೌಡ್ರ ಲೆಕ್ಕದಲ್ಲಿಯೂ ಇಲ್ಲ, ಕುಲಕರ್ಣಿ ಪುಸ್ತಕದಲ್ಲಿಯೂ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ದಲಿತರು, ಹಿಂದುಳಿದವರು, ಗೌಡರ 3 ಗುಂಪುಗಳು ಕಾಂಗ್ರೆಸ್ ಸರ್ಕಾರದಲ್ಲಿವೆ. ಸಿದ್ದರಾಮಯ್ಯ ಕೇವಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟು, ಪುರುಷರಿಗೆ ಫ್ರೀ ಬಸ್ ಕೊಡದೇ ಪಾಪದ ಕೆಲಸ ಮಾಡ್ತಾ ಇದ್ದಾರೆ. ರಾಜ್ಯ ಸರ್ಕಾರ 5 ತಿಂಗಳಲ್ಲಿ ಸಂಪೂರ್ಣ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಸಿಎಂ ಸಿದ್ದರಾಮಯ್ಯ ಅವರು ಭಂಡತನಕ್ಕೆ ಬಿದ್ದಿದ್ದಾರೆ. ಸುಳ್ಳು ಗ್ಯಾರಂಟಿಗಳನ್ನು ನೋಡಿ ಸರ್ಕಾರಕ್ಕೆ ,ಜನರು ಕಲ್ಲು ಹೊಡೆಯುವ ಕಾಲ ಬರುತ್ತೆ.ಸಿಎಂ ಸಿದ್ದರಾಮಯ್ಯ ಮಾತನ್ನು ಯಾರೂ ಕೇಳುತ್ತಿಲ್ಲ. ಮಂತ್ರಿಗಳಿಗೆ ಊಟ-ತಿಂಡಿ ಕೊಟ್ಟು ಗದ್ದ-ತುಟಿ ಸವರುವ ಪರಿಸ್ಥಿತಿ ಸಿಎಂ ಸಿದ್ದರಾಮಯ್ಯರಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…