ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೇ ಹಾಡಿ ಜನರ ಹೆಣಗಾಟ

ಮೈಸೂರು : ಸರಗೂರು ತಾಲ್ಲೂಕಿನ ಬಿ. ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲನಹಳ್ಳಿಯ ಹಾಡಿ ಜನರ ದುಸ್ಥಿತಿ ಹೇಳತೀರದಾಗಿದೆ. ಕಾಡಿ‌ನಲ್ಲಿ ಶವಸಂಸ್ಕಾರಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದರಿಂದ ಹೆಣ ಹೂಳಲೂ ಜಾಗವಿಲ್ಲದೆ ಆದಿವಾಸಿಗಳು ಪರದಾಡುತ್ತಿದ್ದಾರೆ.

ಈ ಹಾಡಿಯಲ್ಲಿ ಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿ ಆದಿವಾಸಿಗಳು ಕಾಡು ಹೆಣವಾಗುತ್ತಿದ್ದಾರೆ .
ಹಾಡಿ ಜನರು ಮೃತಪಟ್ಟರೆ ಹೂಳಲು ಇಲ್ಲ ಸ್ಮಶಾನ. ಕಾಡಿನಲ್ಲೆ ಶವಸಂಸ್ಕಾರ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ತಾಲೂಕು ಆಡಳಿತದ ಸ್ಮಶಾನ ಜಾಗ ನೀಡುವಂತೆ ಆದಿವಾಸಿಗಳ ಆಗ್ರಹ.

× Chat with us