ರಾಜ್ಯ

ಸುವರ್ಣಸೌಧ ಅಧಿವೇಶನ: ಎಸ್‌.ಎಂ.ಕೃಷ್ಣ ಪುತ್ಥಳಿ ನಿರ್ಮಾಣಕ್ಕೆ ಎಚ್.ಕೆ.ಪಾಟೀಲ್‌ ಮನವಿ

ಬೆಳಗಾವಿ: ಮಾಜಿ ಸಿಎಂ ಎಸ್‌.ಎಂ.ಕಷ್ಣ ಅವರು ಇಂದು ನಿಧನರಾದ ಹಿನ್ನೆಲೆ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಾಣ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಎಚ್‌.ಕೆ.ಪಾಟೀಲ್‌ ಮನವಿ ಮಾಡಿದ್ದಾರೆ.

ಸುವರ್ಣಸೌಧದಲ್ಲಿ ಇಂದು(ಡಿ.10) ನಡೆದ ಚಳಿಗಾಲದ ಅಧಿವೇಶನದಲ್ಲಿ ಎಸ್‌.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಎಸ್‌ಎಂಕೆ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಆಲಮಟ್ಟಿ ಜಲಾಶಯದ ಕೃಷ್ಣ ನೀರಾವರಿ ಯೋಜನೆ ಪ್ರದೇಶದಲ್ಲಿಯೂ ಸಹ ಅವರ ಸ್ಮಾರಕವನ್ನು ನಿರ್ಮಾಣ ಮಾಡಬೇಕು. ಅವರ ಪುತ್ಥಳಿಯನ್ನು ಸರ್ಕಾರ ನಿರ್ಮಿಸುವುದರಿಂದ ಎಸ್‌.ಎಂ.ಕೃಷ್ಣ ಅವರ ನೆನಪು ಸದಾಕಾಲ ಉಳಿಯುವಂತೆ ಆಗುತ್ತದೆ ಎಂದು ಹೇಳಿದ್ದಾರೆ.

 

 

ಅರ್ಚನ ಎಸ್‌ ಎಸ್

Recent Posts

ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹುಣಸೂರು…

17 mins ago

ಓದುಗರ ಪತ್ರ: ಅದಲು-ಬದಲು…!

ಓದುಗರ ಪತ್ರ: ಅದಲು-ಬದಲು...! ಬೆಂಗಳೂರಿನಿಂದ ಬೆಳಗಾವಿಗೆ ಬಲುದೂರ ದೂರ ಬಂತು ಚಳಿಗಾಲದ ಅಧಿವೇಶನ ! ವಿಧಾನ ಸೌಧದಿಂದ ಸುವರ್ಣ ಸೌಧಕ್ಕೆ…

19 mins ago

ಓದುಗರ ಪತ್ರ:  ಚರಂಡಿಯಲ್ಲಿ ಕಸ ತೆರವುಗೊಳಿಸಿ

ಮೈಸೂರಿನ ಶ್ರೀರಾಂಪುರ ಬಡಾವಣೆ ಎರಡನೇ ಹಂತದಲ್ಲಿ ಎಸ್‌ಬಿಎಂ ಕಾಲೋನಿಯಲ್ಲಿರುವ ನಂದಿನಿ ಹಾಲಿನ ಕೇಂದ್ರದ ಎದುರಿನ ಚರಂಡಿಯಲ್ಲಿ ಕಸ ಕಡ್ಡಿಗಳು ತುಂಬಿದ್ದು,…

52 mins ago

ಓದುಗರ ಪತ್ರ:  ಸಾರ್ವಜನಿಕ ಶೌಚಾಲಯಗಳ ಬೀಗ ತೆರೆಯಿರಿ

ಮೈಸೂರಿನ ಮೆಟ್ರೋ ಪೋಲ್ ವೃತ್ತದ ಹತ್ತಿರ (ಮಹಾರಾಣಿ ಕಾಲೇಜು) ಮತ್ತು ಗಂಡಭೇರುಂಡ ಉದ್ಯಾನವನದ ಮುಂಭಾಗದಲ್ಲಿ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ…

1 hour ago

ಓದುಗರ ಪತ್ರ: ಅನಗತ್ಯ ಸಿಸೇರಿಯನ್: ಆಸ್ಪತ್ರೆಗಳ ವಿರುದ್ಧ ಕ್ರಮ ಸ್ವಾಗತಾರ್ಹ

ಹೆರಿಗೆ ಸಮಯದಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕೆಪಿಎಂಇ ಅಧಿನಿಯಮ ಕಾಯ್ದೆ ಪ್ರಕಾರ ಕಾನೂನು ಕ್ರಮ…

1 hour ago

ಪಂಜು ಗಂಗೊಳ್ಳಿ ವಾರದ ಅಂಕಣ: ವಿಕಲಾಂಗರ ಬದುಕಿಗೆ ಚಲನೆ ನೀಡುವ ಸಂದೀಪ್ ತಲ್ವಾರ್

ಸ್ವಾವಲಂಬನೆಗೆ ಸಹಕಾರಿಯಾದ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ 2010ರ ಆಗಸ್ಟ್ ತಿಂಗಳಿನಲ್ಲಿ ನಾಗ್ಪುರದ ನಿವಾಸಿ ನಿತೀನ್‌ರ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಲು…

2 hours ago