ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಮತ್ತೆ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಮುಂದಿನ ವಾರದಿಂದ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರೂ ಆಡಳಿತಾತಕ ಸಮಸ್ಯೆ ಎದುರಾಗಿರುವುದರಿಂದ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.
ನಾವು ಪ್ರತಿ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿದ್ದೇವೆ. ಈಗಾಗಲೇ 23 ಕಂತುಗಳ ಹಣ ಬಿಡುಗಡೆಯಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದರೂ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣ ಬಿಡುಗಡೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ.
ಈ ಎರಡು ಬಾಕಿ ಕಂತುಗಳು ಹಿಂದಿನ ಹಣಕಾಸು ವರ್ಷಕ್ಕೆ ಸೇರಿವೆ. ಪ್ರಸ್ತುತ ಹಣಕಾಸು ವರ್ಷವು ಈಗ ಕೊನೆಯ ತ್ರೈಮಾಸಿಕವನ್ನು ತಲುಪಿದೆ ಮತ್ತು ಸರ್ಕಾರದ ಕಂದಾಯ ಖಾತೆಯ ಹಣವು ಬಹುತೇಕ ವ್ಯಯವಾಗಿದೆ.
ಹಿಂದಿನ ವರ್ಷದ ಬಾಕಿಯನ್ನು ಪ್ರಸಕ್ತ ಸಾಲಿನಲ್ಲಿ ಪಾವತಿಸಲು ಹೊಸದಾಗಿ ನಿಧಿಯನ್ನು ಒದಗಿಸುವುದು ಕಷ್ಟಕರವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಎರಡು ಪೂರಕ ಬಜೆಟ್‍ಗಳನ್ನು ಮಂಡಿಸಲಾಗಿದ್ದರೂ, ಈ ಬಾಕಿ ಪಾವತಿಗಳನ್ನು ಅವುಗಳಲ್ಲಿ ಸೇರಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:-ದುರಂಧರ್ ಸಕ್ಸಸ್ | ದಿಢೀರ್ ಸಂಭಾವನೆ ಏರಿಕೆ ; ದೃಶ್ಯಂ-3 ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ
ಈ ಹಣವು ಹಿಂದಿನ ವರ್ಷದ ಬಜೆಟ್ ವ್ಯಾಪ್ತಿಗೆ ಬರುವುದರಿಂದ, ಈಗ ಇದನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಯು ವಿಶೇಷ ಮಾರ್ಗಗಳನ್ನು ಹುಡುಕಬೇಕಿದೆ. ಫಲಾನುಭವಿಗಳಿಗೆ ಬಾಕಿ ಹಣ ತಲುಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದು, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ವಿಳಂಬಕ್ಕೆ ಕಾರಣವೇನು?
ಗೃಹಲಕ್ಷಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ.ಗಳನ್ನು 1.2 ಕೋಟಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಆದರೆ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅಂದಾಜು 5,500 ಕೋಟಿ ರೂ. ಮೊತ್ತದ ಕಂತುಗಳು ತಾಂತ್ರಿಕ ಕಾರಣಗಳಿಂದಾಗಿ ಪಾವತಿಯಾಗಿಲ್ಲ ಎಂದು ಸರ್ಕಾರ ಒಪ್ಪಿಕೊಂಡಿದೆ.
ಫೆಬ್ರವರಿ ತಿಂಗಳಿನಲ್ಲಿ ಹಣ ಪಾವತಿ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲೂಕು ಪಂಚಾಯತ್‍ಗಳ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ವರ್ಗಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಹಳೆಯ ಕಂತುಗಳು ಪ್ರಕ್ರಿಯೆಗೊಳ್ಳದೆ ಬಾಕಿ ಉಳಿದಿವೆ. ಪ್ರಸ್ತುತ ಹಣಕಾಸು ವರ್ಷದ ಅಂತಿಮ ಹಂತದಲ್ಲಿರುವುದರಿಂದ ಮತ್ತು ಕಂದಾಯ ಖಾತೆಯಲ್ಲಿ ಹಣದ ಕೊರತೆ ಇರುವುದರಿಂದ ಈ ಬಾಕಿ ಮೊತ್ತವನ್ನು ಪಾವತಿಸುವುದು ಸವಾಲಾಗಿದೆ.
ಬಾಕಿ ಉಳಿದ ಕಂತುಗಳು ಎಷ್ಟು?
ಆಡಳಿತಾತ್ಮಕ ಕಾರಣಗಳಿಂದಾಗಿ 2023-24ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪಾವತಿಗಳು ವಿಳಂಬವಾಗಿವೆ. ಈ ಬಾಕಿ ಮೊತ್ತದ ಒಟ್ಟು ಮೌಲ್ಯ ಅಂದಾಜು 5,500 ಕೋಟಿ ರೂ.ಆಗಿದ್ದು, ಇತ್ತಿ?ಚೆಗೆ ನಡೆದ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಈ ವಿಷಯ ಪ್ರಸ್ತಾಪಿಸುವವರೆಗೆ ಈ ಲೋಪವು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ.
ಇದಕ್ಕೆ ಉತ್ತರಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ ಹೆಬ್ಬಾಳ್ಕರ್, ನಾವು ಈಗಾಗಲೇ ಏಪ್ರಿಲ್ ತಿಂಗಳಲ್ಲೇ ಈ ಬಗ್ಗೆ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದೇವೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ತಕ್ಷಣ ಬಾಕಿ ಕಂತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಡ್ಡುಗಳ ವಿತರಣೆ ಮೈಸೂರು : ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು…
ದಾವಣಗೆರೆ : ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ…
ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿ ಗರ್ಭಿಣಿ ಪುತ್ರಿ ಮಾನ್ಯಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ಈ ಮರ್ಯಾದೆ…
ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…
ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…