ಬೆಂಗಳೂರು: ಖಾಸಗೀ ಶಾಲೆಗಳು ವಿಧಿಸುವಂತ ಶುಲ್ಕದ ಬಗ್ಗೆ ಸರ್ಕಾರವು ಶಾಲಾ ಶುಲ್ಕ ನಿಗಧಿ ಪಡಿಸುವಂತ ಅಧಿಕಾರವಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂಬುದಾಗಿ ರಾಜ್ಯ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ನೀಡಿದೆ.
ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕರ್ನಾಟಕ ಶಿಕ್ಷಣ ಕಾಯ್ದೆಯು ನಿಯಮಗಳನ್ನು ಪ್ರಶ್ನಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ನಡೆಸಿತು.
ಶಾಲಾ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷಿ ವಿಧಿಸುವಂತಿಲ್ಲ ಎಂಬುದಾಗಿ ಹೇಳಿತು. ಅಲ್ಲದೇ ಹೀಗೆ ಶಿಕ್ಷೆ ವಿಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ ೨(೧೧)ಎ ವಿಧಿಗೆ ವಿರುದ್ಧವಾಗಿದೆ. ಅಲ್ಲದೇ ಸಂವಿಧಾನದ 14ನೇ ವಿಧಿಯ ವಿರುದ್ಧವಾಗಿದೆ ಎಂಬುದಾಗಿ ಹೇಳಿತು.
ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಸಹ ಕಾನೂನು ಬಾಹಿರವಾಗಿದೆ ಎಂಬುದಾಗಿ ಹೇಳುವ ಮೂಲಕ ರಾಜ್ಯ ಉಚ್ಚ ನ್ಯಾಯಾಲಯ ಖಾಸಗಿ ಅನುದಾನಿತ ಶಾಲೆಗಳಿಗೆ ದೊಡ್ಡಮಟ್ಟದಲ್ಲಿ ನಿರಾಳ ನೀಡಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಆರ್ಡಿ ಪೆರೇಡ್ಗಿಲ್ಲ ಕರ್ನಾಟಕದ ಸ್ತಬ್ಧ ಚಿತ್ರ