ಹುಬ್ಬಳ್ಳಿ : ನಾನೂ ಬಿಜೆಪಿಯಲ್ಲಿ ಇದ್ದು ಬಂದವನು. ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅನುಭವ ನನಗೂ ಆಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇಂದು (ಗುರುವಾರ) ಹುಬ್ಬಳ್ಳಿಯಲ್ಲಿ ಜಾತಿ ಕಾರಣಕ್ಕೆ ನಾಗ್ಪುರದ ಆರ್‌ಎಸ್ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದೊಳಗೆ ಬಿಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು, ಜಾತಿ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದರೆ ಅದು ಖಂಡನೀಯ ಎಂದರು.
ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರುವಿಡುತ್ತಿದ್ದರು. ಆದರೆ ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ಮನವರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇದೇ ವೇಳೆ, ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಬೆಂಗಳೂರು: ಹೈಕೋರ್ಟ್‌ಗೆ ಡಿಸೆಂಬರ್.20ರಿಂದ 31ರವರೆಗೆ ಎರಡು ವಾರ ಚಳಿಗಾಲದ ರಜೆ ಇರುತ್ತದೆ. ಹೊಸ ವರ್ಷದ ಮೊದಲ ದಿನ ರಜೆ ಇರಲಿದ್ದು,…
ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರ ನಿವಾಸಕ್ಕೆ ತೆರಳಿದ ಡಿಕೆ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ .…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಮುಂಭಾಗದಲ್ಲಿ ರೀಲ್ಸ್ ಮಾಡಿದ್ದ ಮಹಿಳೆ ಹಾಗೂ ಹಿಟಾಚಿ…
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಅಬ್ಬರ ಅಧಿಕವಾಗಿದ್ದು ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಚಳಿ ಕಂಡುಬರುತ್ತಿದೆ . ಹವಮಾನ ಇಲಾಖೆಯ…
ಕರ್ನಾಟಕದಾದ್ಯಂತ ಇಂದು ರಾಷ್ಟ್ರೀಯಾ ಪಲ್ಸ್ ಪೋಲಿಯೋ ಅಭಿಯಾನ 2025 ಚಾಲನೆ ಹೊರಡಿಸಲಾಗಿದ್ದು , ಡಿ.24 ವರೆಗೆ ಈ ಅಭಿಯಾನದಲ್ಲಿ 5…
ದೆಹಲಿ ಕಣ್ಣೋಟ -ಶಿವಾಜಿ ಗಣೇಶನ್ ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ…