ಬೆಂಗಳೂರು,- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್) 240 ರೂ. ಏರಿಕೆಯಾಗಿದ್ದು, ಒಟ್ಟಾರೆಯಾಗಿ 13,855 ರೂ.ಗೆ ತಲುಪಿದೆ. ನಿನ್ನೆ ಕೂಡ 197 ರೂ. ಏರಿಕೆಯಾಗಿತ್ತು.
22 ಕ್ಯಾರೆಟ್‍ನ ಚಿನ್ನ ಪ್ರತಿ ಗ್ರಾಂ.ಗೆ 220 ರೂ. ಏರಿಕೆಯಾಗಿದ್ದು, ಇಂದು 12,700 ರೂ.ಗೆ ತಲುಪಿದೆ.ಡಿಸೆಂಬರ್ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಚಿನ್ನದ ಧಾರಣೆ ಇಂದು ಸಾರ್ವಕಾಲಿಕ ದಾಖಲೆ ಬರೆದಿದೆ.
ಹೂಡಿಕೆದಾರರು ಹೆಚ್ಚಾಗಿ ಚಿನ್ನದ ಮೇಲೆ ಬಂಡವಾಳ ಹೂಡುತ್ತಿರುವುದು ಹಾಗೂ ವಿವಿಧ ರಾಷ್ಟ್ರಗಳು ಕೇಂದ್ರೀಯ ಬ್ಯಾಂಕ್‍ಗಳು ಹೆಚ್ಚಾಗಿ ಚಿನ್ನ ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಕಾರಣ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ. ಜೊತೆಗೆ ಆಭರಣ ಪ್ರಿಯರು ಕೂಡ ಬೆಲೆ ಏರಿಕೆಯಾದರೂ ಖರೀದಿ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಚಿನ್ನದ ಧಾರಣೆ ನಿರಂತರವಾಗಿ ಏರಿಕೆಯತ್ತಲೇ ಸಾಗುತ್ತಿದೆ.
ಇದನ್ನು ಓದಿ: ಭಾರತದಲ್ಲಿ ಚಿನ್ನದ ಬೆಲೆ ಏರಿಕೆ
ಚಿನ್ನದಂತೆಯೇ ಬೆಳ್ಳಿ ಧಾರಣೆಯೂ ನಿರಂತರ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚಾಗಿದೆ. ಇಂದು ಪ್ರತೀ ಗ್ರಾಂ ಬೆಳ್ಳಿಗೆ 4 ರೂ. ಹೆಚ್ಚಳವಾಗಿದ್ದು, 223 ರೂ.ಗೆ ತಲುಪಿದೆ. ನಿನ್ನೆ ಕೂಡ 5 ರೂ.ನಷ್ಟು ಹೆಚ್ಚಳವಾಗಿತ್ತು.
ಚಿನ್ನದಂತೆಯೇ ಡಿಸೆಂಬರ್ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಬೆಳ್ಳಿಯ ಧಾರಣೆ ಈಗಾಗಲೇ ಪ್ರತೀ ಕೆಜಿಗೆ 2 ಲಕ್ಷ ರೂ. ಗಡಿ ದಾಟಿದ್ದು, ಪ್ರಸ್ತುತ 2,23,000 ರೂ.ಗೆ ತಲುಪಿದ್ದು, ಗ್ರಾಹಕರು ಹುಬ್ಬೆರಿಸುವಂತೆ ಮಾಡಿದೆ.
ಚಿನ್ನದ ಆಭರಣಗಳು ದುಬಾರಿಯಾದ ಹಿನ್ನಲೆಯಲ್ಲಿ ಆಭರಣ ಪ್ರಿಯರು ಚಿನ್ನಲೇಪಿತ ಬೆಳ್ಳಿಯ ಆಭರಣಗಳಿಗೆ ಮೊರೆ ಹೋಗುತ್ತಿರುವುದು ಬೆಳ್ಳಿಯ ಧಾರಣೆ ಹೆಚ್ಚಾಗಲು ಒಂದು ಕಾರಣವಾದರೆ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಮತ್ತೊಂದು ಕಾರಣವಾಗಿದೆ. ಎಲೆಕ್ಟ್ರಿಕಲ್ ವಾಹನಗಳ ತಯಾರಿಕೆ ಸಂದರ್ಭದಲ್ಲಿ ಬೆಳ್ಳಿಯನ್ನು ಬಳಸಲಾಗುತ್ತಿದೆ. ಹೀಗಾಗಿ ಬೆಳ್ಳಿಗೂ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ವರ್ತಕರ ಅಂದಾಜಿನ ಪ್ರಕಾರ, ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಯುವ ಸೂಚನೆಗಳಿಲ್ಲ. ಏರುಗತಿಯಲ್ಲೇ ಬೆಲೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿವೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ…
ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಾರ್ಮೋದ ಹೆಚ್ಚಿದ್ದು, ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ…
ದಕ್ಷಿಣ ಕನ್ನಡ: ನಾಳೆ(ಮಾರ್ಚ್.1) ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಲಿದ್ದಾರೆ.…
ಬೆಂಗಳೂರು: ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು ತಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮಾ.11ರಿಂದ ನಡೆಸಲು…
ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ರಾಷ್ಟ್ರ ವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ರಾಜಸ್ಥಾನದ ಅಜ್ಮಿರ್‍ನಲ್ಲಿ…
ಮೈಸೂರು: ಮಾರ್ಚ್.3ರಂದು ರಕ್ತಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಹಲವು ದೇವಾಲಯಗಳಲ್ಲಿ ಭಕ್ತರ ದರ್ಶನದ ಸಮಯವನ್ನು ಬದಲಾವಣೆ…